The Kashmir Files: ಪಂಡಿತರನ್ನು ಕಗ್ಗೊಲೆ ಮಾಡಿದವನಿಗೆ ಹಸ್ತಲಾಘವ ಮಾಡಿದ್ದರು ಅಂದಿನ ಪ್ರಧಾನಿ..!
ಇಸ್ಲಾಮಿಕ್ ಮೂಲಭೂತವಾದ, ದಿಲ್ಲಿಯಲ್ಲಿ ಆಳುವವರ ಬೇಜವಾಬ್ದಾರಿತನ, ಪರಿಸ್ಥಿತಯ ತೀವ್ರತೆಯ ಕನಿಷ್ಠ ವರದಿಯನ್ನು ಮಾಡದೇ ಕೈಕಟ್ಟಿಕುಳಿತ ಮಾಧ್ಯಮಗಳು ಮತ್ತು ಬುದ್ಧಿಜೀವಿ ವರ್ಗದ ಪರಿಣಾಮದಿಂದ 1990ರಲ್ಲಿ ಕಾಶ್ಮೀರದ ನೆಲದಿಂದ ಪಂಡಿತರನ್ನು ಹೆದರಿಸಿ, ಬೆದರಿಸಿ ಓಡಿಸಲಾಯಿತು.
ಇಸ್ಲಾಮಿಕ್ ಮೂಲಭೂತವಾದ, ದಿಲ್ಲಿಯಲ್ಲಿ ಆಳುವವರ ಬೇಜವಾಬ್ದಾರಿತನ, ಪರಿಸ್ಥಿತಯ ತೀವ್ರತೆಯ ಕನಿಷ್ಠ ವರದಿಯನ್ನು ಮಾಡದೇ ಕೈಕಟ್ಟಿಕುಳಿತ ಮಾಧ್ಯಮಗಳು ಮತ್ತು ಬುದ್ಧಿಜೀವಿ ವರ್ಗದ ಪರಿಣಾಮದಿಂದ 1990ರಲ್ಲಿ ಕಾಶ್ಮೀರದ ನೆಲದಿಂದ ಪಂಡಿತರನ್ನು ಹೆದರಿಸಿ, ಬೆದರಿಸಿ ಓಡಿಸಲಾಯಿತು. ಆಗ ಕಾಶ್ಮೀರಿ ಪಂಡಿತರು ಟ್ರಂಕ್‌ಕಾಲ್ ಮೂಲಕ ದಿಲ್ಲಿಯ ಸೌತ್‌ಬ್ಲಾಕ್, ನಾತ್‌ರ್ ಬ್ಲಾಕ್‌ಗಳಿಗೆ ಸಾವಿರಾರು ಫೋನ್ ಕರೆ ಮಾಡಿ ಸಹಾಯ ಕೇಳಿದರೂ ಯಾರೊಬ್ಬರಿಗೂ ಪಂಡಿತರ ನೋವು, ದುಗುಡ ಕೇಳುವ ಪುರುಸೊತ್ತು ಇರಲಿಲ್ಲ. ಯಾರೊಬ್ಬರೂ ಸಹಾಯಕ್ಕೆ ನಿಲ್ಲಲಿಲ್ಲ.
LRC The Kashmir Files:ಅಷ್ಟಕ್ಕೂ ಕಾಶ್ಮೀರದ ಬಗ್ಗೆ ಕಾಂಗ್ರೆಸ್ ನಿಲುವೇನು?
700 ಪಂಡಿತರನ್ನು ಬರ್ಬರವಾಗಿ ಕಗ್ಗೊಲೆ ಮಾಡಿದರೂ ಈ ಕ್ರೌರ್ಯದ ಸುದ್ದಿಗಳು ದಿಲ್ಲಿಯವರೆಗೂ ಮುಟ್ಟಲಿಲ್ಲ ಎನ್ನುವುದು ಆ ಕಾಲದ ದೊಡ್ಡ ದುರಂತಗಳಲ್ಲಿ ಒಂದು. ಪ್ಯಾಲೆಸ್ತೀನ್ ನಿರಾಶ್ರಿತರು, ರೋಹಿಂಗ್ಯಾ ನಿರಾಶ್ರಿತರ ಬಗ್ಗೆ ಪುಟಗಟ್ಟಲೆ ಬರೆದ ಇತಿಹಾಸ, 5 ಲಕ್ಷ ಪಂಡಿತರನ್ನು ತಮ್ಮ ನೆಲದಿಂದ ಓಡಿಸಿದ ಕತೆಗೆ ಜಾಗೆ ನೀಡದೇ ಇದ್ದದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಇದ್ದಂತಿಲ್ಲ. ಇವೆಲ್ಲದರ ಬಗ್ಗೆ ಒಂದು ವರದಿ ಇಲ್ಲಿದೆ.