RSS ಹಿನ್ನೆಲೆಯ ರೇವಂತ್ ರೆಡ್ಡಿಗೆ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಪಟ್ಟ!
ತೆಲಂಗಾಣದಲ್ಲಿ ರೇವಂತ್ ರೆಡ್ಡಿ ಸಿಎಂ ಅಧಿಕಾರವಧಿ ನಾಳೆಯಿಂದ ಆರಂಭವಾಗಲಿದೆ. ಕೆಸಿಆರ್‌ನ ಭಧ್ರಕೋಟೆಯಲ್ಲಿ ಪುಡಿಪುಡಿ ಮಾಡಿದ ರಗಡ್ ರೆಡ್ಡಿಯ ಜೀವನ ಕಥೆ ಇಲ್ಲಿದೆ.
ಬೆಂಗಳೂರು (ಡಿ.6): ಆತ ಡಿಕೆ ಶಿವಕುಮಾರ್ ಅವರ ಅತ್ಯಾಪ್ತ. ಒಂದು ಕಾಲದಲ್ಲಿ ABVP ಕಾರ್ಯಕರ್ತ.. RSS ಹಿನ್ನೆಲೆಯ ಆ ವ್ಯಕ್ತಿಯೀಗ ತೆಲಂಗಾಣದಲ್ಲಿ ಮುಖ್ಯಮಂತ್ರಿ ಪಟ್ಟವೇರುವ ಸಿದ್ಧತೆಯಲ್ಲಿದ್ದಾರೆ. ಎಲ್ಲಿಯ RSS, ಎಲ್ಲಿಯ ಕಾಂಗ್ರೆಸ್..? ಎತ್ತಣಿಂದೆತ್ತ ಸಂಬಂಧ..? ಇದು ತೆಲಂಗಾಣ ಗೆದ್ದ ರೇವಂತ್ ರೆಡ್ಡಿಯ ರೋಚಕ ಸ್ಟೋರಿ.
ಜೈಲಿಗೆ ಹೋಗಿ ಬಂದಿದ್ದ ರೇವಂತ್ ರೆಡ್ಡಿ, ಸಿಎಂ ಪಟ್ಟದವರೆಗೆ ಬಂದು ನಿಂತದ್ದು ಹೇಗೆ? ಕೆಸಿಆರ್ ಸಾಮ್ರಾಜ್ಯವನ್ನು ಕುಟ್ಟಿ ಕೆಡವಿದ ರಗಡ್ ರೆಡ್ಡಿಯ ಆ ಕುತೂಹಲಕಾರಿ ಕಥೆ ಇಲ್ಲಿದೆ. ರೇವಂತ್ ರೆಡ್ಡಿಯವರ ರಾಜಕೀಯ ಹೆಜ್ಜೆಗಳು ಸಖತ್ ಇಂಟ್ರೆಸ್ಟಿಂಗ್. ಕಾಂಗ್ರೆಸ್ ಸೇರಿ, ಪಕ್ಷದ ಅಧ್ಯಕ್ಷರಾದ ಮೂರೇ ವರ್ಷಗಳಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದಿರುವುದು ಇವರ ವಿಶೇಷತೆ.
ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಮಗಳನ್ನೇ ಪ್ರೀತಿಸಿ ಮದುವೆಯಾಗಿದ್ದ ರೇವಂತ್ ರೆಡ್ಡಿ!
ರೇವಂತ್ ರೆಡ್ಡಿ ಅವರನ್ನು ತೆಲಂಗಾಣದ ಡಿಕೆ ಶಿವಕುಮಾರ್ ಅಂತ ಕರೆಯಲಾಗುತ್ತದೆ. ಅಷ್ಟಕ್ಕೂ ರೇವಂತ್ ರೆಡ್ಡಿಗೆ ಈ ಹೆಸರು ಬಂದದ್ದು ಹೇಗೆ..? ರೇವಂತ್ ರೆಡ್ಡಿ ಗೆಲುವಿನ ಹಿಂದೆ ಕನಕಪುರ ಬಂಡೆಯ ಪಾತ್ರ ಬಹಳ ಮಹತ್ವದ್ದಾಗಿದೆ/ ದೇಶದ ಅತೀ ದೊಡ್ಡ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದ ರೇವಂತ್ ರೆಡ್ಡಿಯೀಗ ತೆಲಂಗಾಣ ರಾಜಕಾರಣದ ನಿಜವಾದ ಮ್ಯಾಚ್ ವಿನ್ನರ್