Asianet Suvarna News Asianet Suvarna News

ರಾಷ್ಟ್ರೀಯ ಹೆದ್ದಾರಿಯಲ್ಲೇ IAF ತುರ್ತು ಭೂಸ್ವರ್ಶ ಏರ್‌ಸ್ಟ್ರಿಪ್‌ ಉದ್ಘಾಟನೆ; ಭಾರತದ ಪ್ರಯತ್ನಕ್ಕೆ ಮೆಚ್ಚುಗೆ!

Sep 9, 2021, 6:53 PM IST

ರಾಜಸ್ಥಾನ(ಸೆ.09): ದೇಶದ ಮೊದಲ ಎಮರ್ಜೆನ್ಸಿ ಲ್ಯಾಂಡಿಂಗ್ ಏರ್‌ಸ್ಟ್ರಿಪ್ ಉದ್ಘಾಟನೆಗೊಂಡಿದೆ. ರಾಜಸ್ಥಾನದ ಬರ್ಮಾರ್‌ನ ರಾಷ್ಟ್ರೀಯ ಹೆದ್ದಾರಿ 925ರಲ್ಲೇ ಈ ತುರ್ತು ಲ್ಯಾಂಡಿಂಗ್ ಫೀಲ್ಡ್ ನಿರ್ಮಿಸಲಾಗಿದೆ. ಈ ಮೂಲಕ ಹೆದ್ದಾರಿಯಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಈ ತುರ್ತು ಲ್ಯಾಂಡಿಂಗ್ ಫೀಲ್ಡ್ ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಸಮೀಪದಲ್ಲಿದೆ. ಹೀಗಾಗಿ ಯುದ್ಧವಿಮಾನಗಳ ತುರ್ತು ಲ್ಯಾಂಡಿಂಗ್ ಹಾಗೂ ಟೇಕ್ ಆಫ್‌ಗೆ ನೆರವಾಗಲಿದೆ.

ಉದ್ಘಾಟನೆ ವೇಳೆ ಭಾರತೀಯ ವಾಯುಸೇನೆಯ ಹಲವು ವಿಮಾನಗಳು ತುರ್ತು ಭೂಸ್ವರ್ಶ ಮಾಡಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸೇರಿ ಗಣ್ಯರನ್ನೊಳಗೊಂಜ ವಾಯುಪಡೆ ವಿಮಾನ ತುರ್ತು ಭೂಸ್ಪರ್ಶ ಮಾಡಿ ಗಮನಸೆಳೆಯಿತು.