ಕೇರಳ: ಮೆರವಣಿಗೆ ವೇಳೆ ಮದವೇರಿದ ಆನೆಯಿಂದ ಪುಂಡಾಟ, ಓರ್ವನ ಸ್ಥಿತಿ ಗಂಭೀರ!

ಮಲ್ಲಪೂರು ಜಿಲ್ಲೆಯ ಶಿರೂರಿನಲ್ಲಿ ಘಟನೆ ನಡೆದಿದೆ. ಮದವೇರಿದ ಆನೆ ಏಕಾಏಕಿ ಜನರ ಮೇಲೆ ದಾಳಿ ಮಾಡಿದೆ. ಗಜರಾಜನ ಆರ್ಭಟಕ್ಕೆ ಜನರು ಕಕ್ಕಾಬಿಕ್ಕಿಯಾಗಿದ್ದಾರೆ.ಆನೆ ದಾಳಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆನೆ ದಾಳಿ ಮಾಡುತ್ತಿದ್ದಂತೆ ಜನರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. 

First Published Jan 9, 2025, 11:42 AM IST | Last Updated Jan 9, 2025, 11:42 AM IST

ಕೇರಳ(ಜ.09): ಮೆರವಣಿಗೆ ವೇಳೆ ಮದವೇರಿದ ಆನೆಯೊಂದು ಪುಂಡಾಟ ನಡೆಸಿದ ಘಟನೆ ಕೇರಳದ ಶಿರೂರಿನಲ್ಲಿ ನಡೆದಿದೆ. ಆನೆಯು ಏಕಾಏಕಿ ಜನರ ಮೇಲೆ ದಾಳಿ ನಡೆಸಿದ್ದು, ಜನರನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದೆ.  17 ಮಂದಿಗೆ ಗಾಯಗಳಾಗಿದ್ದು ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಮಲ್ಲಪೂರು ಜಿಲ್ಲೆಯ ಶಿರೂರಿನಲ್ಲಿ ಘಟನೆ ನಡೆದಿದೆ. ಮದವೇರಿದ ಆನೆ ಏಕಾಏಕಿ ಜನರ ಮೇಲೆ ದಾಳಿ ಮಾಡಿದೆ. ಗಜರಾಜನ ಆರ್ಭಟಕ್ಕೆ ಜನರು ಕಕ್ಕಾಬಿಕ್ಕಿಯಾಗಿದ್ದಾರೆ.ಆನೆ ದಾಳಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆನೆ ದಾಳಿ ಮಾಡುತ್ತಿದ್ದಂತೆ ಜನರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. 

ರಾಜ್ಯ ಕಾಂಗ್ರೆಸ್‌ನಲ್ಲಿ ಒಂದು ಊಟದ ಕಥೆ, ಡಿನ್ನರ್‌ ಪಾರ್ಟಿಗೆ ಬಂಡೆಯಾದ ಡಿಕೆಶಿ!

Video Top Stories