ಕೊರೋನಾ ತುರ್ತು ಚಿಕಿತ್ಸೆಗೆ 2ಡಿಜಿ ‘ಸಂಜೀವಿನಿ’; ರೋಗಿಗಳಲ್ಲಿ ಶೀಘ್ರ ಚೇತರಿಕೆ

ಕೊರೋನಾ ತುರ್ತು ಚಿಕಿತ್ಸೆಗೆ ಬಂತು ದೇಶೀ ಔಷಧ | 2ಡಿಜಿ ಹೆಸರಿನ ‘ಸಂಜೀವಿನಿ’ ಅಭಿವೃದ್ಧಿಪಡಿಸಿದ ಡಿಆರ್‌ಡಿಒ | ನೀರಲ್ಲಿ ಹಾಕಿ ಸೇವಿಸುವ ಪೌಡರ್‌ ರೂಪದ ಮದ್ದು

First Published May 9, 2021, 10:50 AM IST | Last Updated May 9, 2021, 10:50 AM IST

ಬೆಂಗಳೂರು (ಮೇ. 09): ದೇಶಾದ್ಯಂತ ಕೋವಿಡ್‌ ಪ್ರಕರಣಗಳು ದಾಖಲೆ ಮಟ್ಟಕ್ಕೆ ಮುಟ್ಟಿರುವ ಹೊತ್ತಿನಲ್ಲೇ ಹೈದ್ರಾಬಾದ್‌ ಮೂಲದ ಡಾ.ರೆಡ್ಡೀಸ್‌ ಲ್ಯಾಬ್‌ ಸಹಯೋಗದಲ್ಲಿ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಕೋವಿಡ್‌ ಔಷಧವಾದ 2-ಡಿಆಕ್ಸಿ-ಡಿ-ಗ್ಲುಕೋಸ್‌ (2-ಡಿಜಿ) ಎಂಬ ಪೌಡರ್‌ ಅನ್ನು ತುರ್ತು ಬಳಕೆ ಮಾಡಲು ಭಾರತೀಯ ಔಷಧ ನಿಯಂತ್ರಣ ಸಂಸ್ಥೆ(ಡಿಸಿಜಿಐ) ಅನುಮೋದನೆ ನೀಡಿದೆ.

ರಕ್ತ ಹೆಪ್ಪುಗಟ್ಟಿದೆಯಾ ತಿಳಿಯೋಕೆ ಕೊರೊನಾ ಸೋಂಕಿತರು ಡಿ ಟೈಮರ್ ಟೆಸ್ಟ್ ಮಾಡಿಸಿ.!

2ಡಿಜಿ ಔಷಧವು ಕೊರೋನಾ ವೈರಸ್‌ನ ಜೀವಕೋಶವನ್ನು ಸಂಪೂರ್ಣವಾಗಿ ಸುತ್ತುವರೆಯುತ್ತದೆ. ಬಳಿಕ ವೈರಸ್‌ ದ್ವಿಗುಣಗೊಳ್ಳುವುದು ಮತ್ತು ಅದರಿಂದ ಶಕ್ತಿ ಬಿಡುಗಡೆ ತಡೆಯುತ್ತದೆ. ಈ ಮೂಲಕ ವೈರಸ್‌ ವೃದ್ಧಿಯಾಗುವುದನ್ನು ತಡೆಯುತ್ತದೆ.

Video Top Stories