ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಘಟಿಕೋತ್ಸವ, ಕಣ್ಣೀರು ಹಾಕಿದ ಡಾ.ವಂದನಾ ಹೆತ್ತವರು!
ವೈದ್ಯೆಯಾಗುವ ಕನಸು ಕಂಡಿದ್ದ ಮಗಳು ವಂದನಾ ರೋಗಿಯಿಂದಲೇ ಕೊಲೆಯಾಗಿದ್ದು, ವಿವಿಯು ನೀಡಿದ ಮರಣೋತ್ತರ ಎಂಬಿಬಿಎಸ್ ಪ್ರಮಾಣ ಪತ್ರವನ್ನು ಪೋಷಕರು ಕಣ್ಣೀರು ಹಾಕುತ್ತಾ ಪಡೆದಿದ್ದಾರೆ.
ಕೇರಳ (ಆ.04): ವೈದ್ಯೆಯಾಗುವ ಕನಸು ಕಂಡಿದ್ದ ಮಗಳು ವಂದನಾ ರೋಗಿಯಿಂದಲೇ ಕೊಲೆಯಾಗಿದ್ದು, ವಿವಿಯು ನೀಡಿದ ಮರಣೋತ್ತರ ಎಂಬಿಬಿಎಸ್ ಪ್ರಮಾಣ ಪತ್ರವನ್ನು ಪೋಷಕರು ಕಣ್ಣೀರು ಹಾಕುತ್ತಾ ಪಡೆದಿದ್ದಾರೆ. 25ರ ಹರೆಯದ ವಂದನಾ ಎಂಬಿಬಿಎಸ್ ಕಲಿತು, ಹೌಸ್ ಸರ್ಜನ್ ಆಗಿ ಸೇವೆ ಸಲ್ಲಿಸುತ್ತಿದ್ದಾಗ ಮೇ 10 ರಂದು ಕೊಟ್ಟಾರಕ್ಕರದ ತಾಲೂಕು ಆಸ್ಪತ್ರೆಯಲ್ಲಿ ರೋಗಿಯೊಬ್ಬಆಕೆಯನ್ನು ಇರಿದು ಹತ್ಯೆ ಮಾಡಿದ್ದ. ಎಂಬಿಬಿಎಸ್ ಪ್ರಮಾಣ ಪತ್ರ ಪ್ರದಾನ ಕಾರ್ಯಕ್ರಮ ಬುಧವಾರದಂದು ನಡೆದಿದ್ದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಂದ ವಂದನಾಳ ಮರಣೋತ್ತರ ಎಂಬಿಬಿಎಸ್ ಪ್ರಮಾಣ ಪತ್ರ ಸ್ವೀಕರಿಸಿದ ವಂದನಾಳ ಪೋಷಕರಾದ ಉದ್ಯಮಿ ಕೆ.ಜಿ.ಮೋಹನ್‌ದಾಸ್ ಮತ್ತು ಅವರ ಪತ್ನಿ ವಸಂತಕುಮಾರಿ ಭಾವುಕರಾಗಿ ಕಣ್ಣೀರಾಗಿದ್ದಾರೆ.