Asianet Suvarna News Asianet Suvarna News

ಕಾಳಿ ಪೋಸ್ಟರ್ ವಿವಾದ: ಬೇಕಂತಲೇ ಸೃಷ್ಟಿಸ್ತಿದ್ದಾರಾ ಧರ್ಮ ವೈಷಮ್ಯ..?

 ‘ಕಾಳಿ’ ಸಾಕ್ಷ್ಯಚಿತ್ರದ ಪೋಸ್ಟರ್‌ನಲ್ಲಿ ಹಿಂದೂ ದೇವತೆ ಕಾಳಿಯು ಸಿಗರೇಟ್‌ ಸೇದುವಂತೆ ತೋರಿಸಲಾಗಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ.  ಪೋಸ್ಟರ್‌ನಲ್ಲಿ ಮಹಿಳೆಯು ಕಾಳಿಯ ವೇಷ ಧರಿಸಿ ಸಿಗರೇಟ್‌ ಸೇದುತ್ತಿದ್ದಾಳೆ ಅಲ್ಲದೇ ಹಿಂದೆ ಸಲಿಂಗ ಕಾಮಿ ಸಮುದಾಯಗಳ ಪ್ರೈಡ್‌ ಧ್ವಜವನ್ನೂ ತೋರಿಸಲಾಗಿದೆ. 

 ‘ಕಾಳಿ’ (Kaali) ಸಾಕ್ಷ್ಯಚಿತ್ರದ ಪೋಸ್ಟರ್‌ನಲ್ಲಿ ಹಿಂದೂ ದೇವತೆ ಕಾಳಿಯು ಸಿಗರೇಟ್‌ (Cigaratte) ಸೇದುವಂತೆ ತೋರಿಸಲಾಗಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ.  ಪೋಸ್ಟರ್‌ನಲ್ಲಿ ಮಹಿಳೆಯು ಕಾಳಿಯ ವೇಷ ಧರಿಸಿ ಸಿಗರೇಟ್‌ ಸೇದುತ್ತಿದ್ದಾಳೆ ಅಲ್ಲದೇ ಹಿಂದೆ ಸಲಿಂಗ ಕಾಮಿ ಸಮುದಾಯಗಳ ಪ್ರೈಡ್‌ ಧ್ವಜವನ್ನೂ ತೋರಿಸಲಾಗಿದೆ. ಈ ಹಿನ್ನೆಲೆಯಲ್ಲಿ ನೆಟ್ಟಿಗರು ಈ ಪೋಸ್ಟರ್‌ ಅನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.‘ಲೀನಾ ಮಣಿಮೇಖಲೈರನ್ನು ಬಂಧಿಸಿ’ ಎಂಬುದು ಟ್ವೀಟರ್‌ನಲ್ಲಿ ಟ್ರೆಂಡ್‌ ಆಗಿದೆ.

ಪ್ರಚಾರಕ್ಕಾಗಿ ಸೈಕೋಪಾತ್ ಮಾಡಿರುವ ಕೃತ್ಯ: ಕಾಳಿ ವಿವಾದಾತ್ಮಕ ಪೋಸ್ಟರ್ ಬಗ್ಗೆ ಚಂದಾ ಪಾಂಡೆ

ಈ ನಡುವೆ ಕಾಳಿ ಚಿತ್ರದ ಬಗ್ಗೆ ಲೀನಾ (Leena) ಮಾಡಿದ್ದ ಪೋಸ್ಟ್‌ ಅನ್ನು ಟ್ವೀಟರ್‌ (Twitter) ಕೂಡಾ ರದ್ದುಪಡಿಸಿದೆ. ಕಾನೂನಾತ್ಮಕ ಬೇಡಿಕೆ ಅನ್ವಯ ಪೋಸ್ಟ್‌ ತೆಗೆದು ಹಾಕಲಾಗಿದೆ ಎಂದು ಹಳೆಯ ಪೋಸ್ಟ್‌ ಜಾಗದಲ್ಲಿ ಟ್ವೀಟರ್‌ ಸ್ಪಷ್ಟನೆ ನೀಡಿದೆ.

ಅದರ ಬೆನ್ನಲ್ಲೇ ಈ ಬಗ್ಗೆ ವಿಷಾದ ವ್ಯಕ್ತಪಡಿಸಿರುವ, ಸಾಕ್ಷ್ಯಚಿತ್ರ ಪ್ರದರ್ಶನ ಆಯೋಜಿಸಿದ್ದ ಟೊರಂಟೋದ ಆಗಾ ಖಾನ್‌ ಮ್ಯೂಸಿಯಂ, ನಾವು ಆಯ್ಕೆ ಮಾಡಿದ್ದ 18 ಚಿತ್ರಗಳ ಪೈಕಿ ಒಂದು ಚಿತ್ರ ಹಿಂದೂ ಮತ್ತು ಇತರೆ ಧಾರ್ಮಿಕ ಸಮುದಾಯದವರ ಧಕ್ಕೆ ತಂದಿದೆ. ಜೊತೆಗೆ ಮುಂದಿನ ಎಲ್ಲಾ ಪ್ರದರ್ಶನಗಳನ್ನು ರದ್ದುಪಡಿಸಿದ್ದೇವೆ ಎಂದು ಹೇಳಿದೆ.

Video Top Stories