ಪ್ರಚಾರಕ್ಕಾಗಿ ಸೈಕೋಪಾತ್‌ ಮಾಡಿರುವ ಕೃತ್ಯ: ಕಾಳಿ ವಿವಾದಾತ್ಮಕ ಪೋಸ್ಟರ್‌ ಬಗ್ಗೆ ಚಂದಾ ಪಾಂಡೆ

ಕಾಳಿ ಮಾತೆಯ ವೇಷ ಧರಿಸಿದ ಪಾತ್ರಧಾರಿ ಸಿಗರೇಟ್ ಸೇದುತ್ತಿರುವುದು ಮತ್ತು ಸಲಿಂಗಿಗಳ ಧ್ವಜ ಹಿಡಿದಿರುವ ತಮಿಳು ಚಿತ್ರದ ಪೋಸ್ಟರ್‌ಗೆ ವಿರೋಧ ವ್ಯಕ್ತಪಡಿಸಿರುವ ಕಾಳಿ ಮಾತೆ ಆರಾಧಕಿ ಚಂದಾ ಪಾಂಡೆ ಇದೊಂದು ಸೈಕೋಪಾತ್ ಕೃತ್ಯವಾಗಿದೆ ಎಂದಿದ್ದಾರೆ.

Share this Video
  • FB
  • Linkdin
  • Whatsapp

ತಮಿಳು ನಿರ್ದೇಶಕಿ ಲೀನಾ ಮಣಿಮೇಕಲ(Leena Manimekala) ಅವರು ಕಾಳಿ(Kaali) ದೇವಿಯ ಕೈಲಿ ಸಿಗರೇಟ್ ಕೊಟ್ಟು, ಹಿಂದೆ ಸಲಿಂಗಿಗಳ ಧ್ವಜ ಕೊಟ್ಟು ಸಿನಿಮಾವೊಂದರ ಪೋಸ್ಟರ್ ಬಿಡುಗಡೆ ಮಾಡಿರುವ ಬಗ್ಗೆ ಕಾಳಿ ಮಾತೆಯ ಆರಾಧಕಿ ಚಂದಾ ಪಾಂಡೆ ಕಿಡಿ ಕಾರಿದ್ದಾರೆ.

ಕಾಳಿ ಕೈಲಿ ಸಿಗರೇಟ್ ಹೀನ ಪ್ರಚಾರದ ತಂತ್ರ; ಇಷ್ಟಕ್ಕೂ ಈ ಕಾಳಿ ಯಾರು ಗೊತ್ತಾ?

ತಾಯಿಯನ್ನೇ ಅವಮಾನಿಸುವ ತುಚ್ಛ ಮನಸ್ಥಿತಿ ಇದಾಗಿದೆ ಎಂದವರು ಹೇಳಿದ್ದಾರೆ. ಪ್ರಚಾರಕ್ಕಾಗಿ ಇಂಥ ಕೀಳು ಮಟ್ಟಕ್ಕೆ ಇಳಿದ ನಿರ್ದೇಶಕಿ ತಾನು ಹೆಣ್ಣು ಎಂಬುದನ್ನು ಮರೆತಿದ್ದಾರೆಯೇ ಎಂದವರು ಪ್ರಶ್ನಿಸಿದ್ದಾರೆ. 

Related Video