ಭಾರತದ ಮಗ್ಗುಲಲ್ಲೇ ಸಿದ್ಧವಾಗುತ್ತಿದೆ ಚೀನಾದ 11.37 ಲಕ್ಷ ಕೋಟಿಯ ಜಲಾಸ್ತ್ರ!

ಚೀನಾ ನಿರ್ಮಿಸುತ್ತಿರುವ ಬೃಹತ್ ಜಲಾಶಯವು ಭಾರತಕ್ಕೆ ಆತಂಕ ತಂದಿದೆ. ಈ ಜಲಾಶಯವು ಕ್ಷಾಮ ಮತ್ತು ಪ್ರವಾಹಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದ್ದು, ಭಾರತದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಬ್ರಹ್ಮಪುತ್ರಾ ನದಿಯ ಮೇಲೆ ನಿರ್ಮಾಣವಾಗುತ್ತಿರುವ ಈ ಅಣೆಕಟ್ಟು ವಿಶ್ವದ ಅತಿದೊಡ್ಡ ಅಣೆಕಟ್ಟು ಆಗಿರಲಿದೆ.

First Published Dec 31, 2024, 3:46 PM IST | Last Updated Dec 31, 2024, 3:46 PM IST

ಬೆಂಗಳೂರು (ಡಿ.31): ಭಾರತಕ್ಕೆ ಆಪತ್ತು ತಂದಿದೆ ಚೀನಾದ ಜಲ ಯುದ್ಧತಂತ್ರ. 11.37 ಲಕ್ಷ ಕೋಟಿ ಮೌಲ್ಯದ ಜಲಾಸ್ತ್ರ ಏನು ಮಾಡಲಿದೆ ಅನ್ನೋ ಕುತೂಹಲ ಭಾರತಕ್ಕಿದೆ. ಈ ಜಲಾಸ್ತ್ರ ಕ್ಷಾಮ ಸೃಷ್ಟಿಸುತ್ತೆ, ಪ್ರವಾಹ ತರಿಸುತ್ತೆ, ಅಂಥ ಆ ಭೀಕರ ಆಯುಧ ಇದಾಗಿದೆ.

ಸಪ್ತರಾಜ್ಯಗಳ ಜನಕ್ಕೆ ಈಗ ಜಲಕಂಟಕ ಶುರುವಾಗಿದೆ. ಡ್ರ್ಯಾಗನ್ ವಾಟರ್ ವಾರ್ ಭಾರತಕ್ಕೆ ದೊಂಡ ಆತಂಕ ನೀಡಬಹುದು ಎಂದು ಹೇಳಲಾಗಿದ್ದು,  ಬ್ರಹ್ಮಪುತ್ರಾ ನದಿಗೆ ಚೀನಾ ಅಣ್ಣೆಕಟ್ಟು ಕಟ್ಟಲು ಮುಂದಾಗಿದೆ. ಇದು ಅಂತಿಂಥ ಡ್ಯಾಮ್‌ ಅಲ್ಲ, ವಿಶ್ವದ ಅತಿದೊಡ್ಡ ಡ್ಯಾಂ ಆಗಿರಲಿದೆ.

ಬ್ರಹ್ಮಪುತ್ರ ನದಿಗೆ ವಿಶ್ವದ ಅತಿ ದೊಡ್ಡ ಜಲವಿದ್ಯುತ್ ಅಣೆಕಟ್ಟು: ಭಾರೀ ಆತಂಕ

ಚೀನಾದ ಡ್ಯಾಮ್‌ ಬರೀ ಚೀನಾದ ಪ್ರಗತಿಗೋಸ್ಕರವೇ ನಿರ್ಮಾಣವಾಗುತ್ತಿಲ್ಲ. ಅದು ಹುಟ್ಟುತ್ತಿರೋದೇ ಬೇರೆ ದೇಶಗಳ ಅವನತಿಗೋಸ್ಕರ. ಘೋರ ದುರಂತವೊಂದಕ್ಕೆ ಮುನ್ನುಡಿ ಬರೆಯೋದಕ್ಕೋಸ್ಕರ.