Asianet Suvarna News Asianet Suvarna News

ಗುಡುಗು ಸಿಡಿಲು ಸಹಿತ ಮಳೆಗೆ ತತ್ತರಿಸಿದ ರಾಷ್ಟ್ರ ರಾಜಧಾನಿ: ದೆಹಲಿಯಲ್ಲಿ ಜನಜೀವನ ಅಸ್ತವ್ಯಸ್ತ

*ದೆಹಲಿ ಮೇಲೆ ಒಟ್ಟಿಗೇ ದಾಳಿ ಮಾಡಿದ ಬಿರುಗಾಳಿ.. ಮಳೆ..
*ವಿಮಾನ ಹಾರಾಟ ಬಂದ್​​​.. ಧರೆಗುರುಳಿದ ಮರಗಳು..
*49 ಡಿಗ್ರಿಯಿಂದ 18 ಡಿಗ್ರಿಗೆ ದಿಢೀರ್​ ಕುಸಿದ ತಾಪಮಾನ

ನವದೆಹಲಿ (ಮೇ 24):  ಕೆಲ ದಿನಗಳಿಂದ ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ. ಆದ್ರೆ ರಾಜ್ಯದ ಅಬ್ಬರದ ಮಳೆ ದೆಹಲಿಗೆ (Delhi Rain Updates)ಶಿಫ್ಟ್​​ ಆದಂತಿದೆ. ಇದ್ದಕ್ಕಿದ್ದಂತೆ ದೆಹಲಿ ಹವಾಮಾನ ಬದಲಾಗಿದೆ. ದೆಹಲಿಯಲ್ಲಿ ಏಕಾಏಕಿ ದಿಢೀರ್​ ಮಳೆ ಶುರುವಾಗಿದೆ. ಅತೀಯಾದ ಮಳೆ ಅಬ್ಬರದಿಂದಾಗಿ ದೆಹಲಿ ಸ್ಥಿತಿ ಅಸ್ತವ್ಯಸ್ತವಾಗಿದೆ. ದೇಶದಲ್ಲಿನ ಇತ್ತೀಚಿನ ವಾತಾವರಣ ಎಲ್ಲರನ್ನೂ ಕನ್​ಫ್ಯೂಸ್​​ ಮಾಡುತ್ತಿದೆ. ಕಳೆದ ಒಂದು ವಾರದ ಹಿಂದೆ ದೆಹಲಿಯಲ್ಲಿ 49 ಡಿಗ್ರಿ ಸೆಲ್ಸಿಯಸ್​​​​​ ತಾಪಮಾನವಿತ್ತು. ಇಷ್ಟೊಂದು ಧಗೆ ತಾಳಲಾರದೆ ದೆಹಲಿ ಜನ ತತ್ತರಿಸಿದ್ದರು. ವಿಪರೀತ ಬಿಸಿಲಿನಿಂದ ಮನೆಯಿಂದ ಆಚೆ ಬರಲು ಯೋಚಿಸುವಂತಾಗಿತ್ತು ದೆಹಲಿ

ಇದನ್ನೂ ನೋಡಿ: ಮಹಾ ಮಳೆಗೆ ತತ್ತರಿಸಿದ ಕರುನಾಡು: ಯಾವ ಜಿಲ್ಲೆಯಲ್ಲಿ ಹೇಗಿದೆ ವರುಣನ ಅಬ್ಬರ?

ಆದ್ರೆ ನಿನ್ನೆ ಇದ್ದಕ್ಕಿದ್ದಂತೆ, 49 ಡಿಗ್ರಿ ಸೆಲ್ಸಿಯಸ್​​ ತಾಪಮಾನ ಇದ್ದಕ್ಕಿದ್ದಂತೆ ಮಾಯವಾಗಿದೆ. ಕೇವಲ ಮೂರು ಗಂಟೆಯಲ್ಲಿ 49 ಗಂಟೆ ಇದ್ದ ದೆಹಲಿ ತಾಪಮಾನ ದಿಢೀರ್​​ 18ಕ್ಕೆ ಕುಸಿದಿತ್ತು. ಸೆಕೆ ಎಂದು ಫ್ಯಾನ್​ ಹಾಕಿಕೊಂಡು ಮಲಗಿದ್ದ ದೆಹಲಿ ಜನಕ್ಕೆ ಇದ್ದಕ್ಕಿದ್ದಂತೆ ಜಳಿಜ್ವರ ಶುರುವಾಗಿತ್ತು.  ಕೇವಲ ಮಳೆ ಮಾತ್ರವಲ್ಲ, ಒಂದೇ ಸಮಯಕ್ಕೆ, ಗುಡುಗು-ಸಿಡಿಲಿನ ಮಳೆ ಜೊತೆಗೆ ಬರಸದ ಬಿರುಗಾಳಿ ಬೀಸಲು ಆರಂಭಿಸಿದೆ. ದಿಢೀರ್​​ ಬದಲಾದ ವಾತಾವರಣಕ್ಕೆ ದೆಹಲಿ ತತ್ತರಿಸಿ ಹೋಗಿದೆ.  ಈ ಕುರಿತ ವರದಿ ಇಲ್ಲಿದೆ 

Video Top Stories