News Hour: ಕಾಂಗ್ರೆಸ್ ಬಯಲಿಗೆ ತಂದ ಕೇಸ್​ನಲ್ಲಿ ಅರವಿಂದ್‌ ಕೇಜ್ರಿವಾಲ್ ಅರೆಸ್ಟ್!


ಅಕ್ರಮ ಮದ್ಯನೀತಿ ಪ್ರಕರಣದಲ್ಲಿ ದೆಹಲಿಯ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರನ್ನು ದೆಹಲಿಯ ರೋಸ್‌ ಅವೆನ್ಯು ಕೋರ್ಟ್‌ 7 ದಿನ ಇಡಿ ಕಸ್ಟಡಿಗೆ ಒಪ್ಪಿಸಿದೆ. ಮಾರ್ಚ್‌ 28ರವರೆಗೆ ಅವರು ಇಡಿ ಕಸ್ಟಡಿಯಲ್ಲಿ ವಿಚಾರಣೆಗೆ ಒಳಪಡಲಿದ್ದಾರೆ.

Share this Video
  • FB
  • Linkdin
  • Whatsapp

ನವದೆಹಲಿ (ಮಾ.22): ದೆಹಲಿಯ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರ ಬಂಧನವನ್ನು ಕಾಂಗ್ರೆಸ್‌ ಪಕ್ಷ ಪ್ರಶ್ನೆ ಮಾಡುತ್ತಿದೆ. ಆದರೆ, ಈ ಪ್ರಕರಣವನ್ನು ಮೊದಲು ಬಯಲಿಗೆ ತಂದಿದ್ದೇ ಕಾಂಗ್ರೆಸ್‌ ಎಂದು ಬಿಜೆಪಿ ಹೇಳಿದೆ. ಪ್ರಕರಣದ ಕುರಿತಾಗಿ 2022ರ ಜುಲೈನಲ್ಲಿ ಕೇಜ್ರಿವಾಲ್ ವಿರುದ್ಧ ಕಾಂಗ್ರೆಸ್ ದೂರು ನೀಡಿತ್ತು. ಈಗ ದೆಹಲಿ ಕಾಂಗ್ರೆಸ್‌, ಕೇಜ್ರಿವಾಲ್‌ ಬಂಧನವನ್ನು ವಿರೋಧಿಸುತ್ತಿದೆ ಎಂದಿದೆ.

ಅಂದು ದೆಹಲಿ ಕಾಂಗ್ರೆಸ್‌ನ ನಾಯಕರಾಗಿದ್ದ ಅಜಯ್‌ ಮಾಕೆನ್‌ ಪತ್ರಿಕಾಗೋಷ್ಠಿ ನಡೆಸಿ ಹಗರಣವನ್ನು ಬಯಲಿಗೆಳೆದಿದ್ದರು.' ಲಿಕ್ಕರ್ ಹಗರಣ ಈಗ ಬಟಾ ಬಯಲಾಗಿದೆ. ಇವರು ಕೋಟಿ ಕೋಟಿ ಹಣ ಲೂಟಿ ಹೊಡೆದಿದ್ದಾರೆ. ಅರವಿಂದ್​​ ಕೇಜ್ರಿವಾಲ್​ ತಮ್ಮ ಬ್ಯುಸಿನೆಸ್​ಗಾಗಿ ಪ್ರೈವೇಟ್ ವೋಲ್​​ಸೆಲ್ ಡಿಲರ್ಸ್​​ ಜೊತೆ ​ಸೇರಿಕೊಂಡು ಶೇ.5 ರಿಂದ ಶೇ12 ರಷ್ಟು ಕಮಿಷನ್​ ತಗೊಂಡಿದ್ದಾರೆ ಎಂದು ಆರೋಪ ಮಾಡಿದ್ದರು.

Breaking: ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ಗೆ 7 ದಿನ ಕಸ್ಟಡಿ!

ಅದರಲ್ಲಿ ಶೇ.6ರಷ್ಟು ಕಿಕ್​ಬ್ಯಾಕ್​​ ಅನ್ನು ಅರವಿಂದ್​ ಕೇಜ್ರಿವಾಲ್ ತಗೊಂಡಿದ್ದಾರೆ. 100 ಕೋಟಿ ಹಣವನ್ನ ಗೋವಾ ಚುನಾವಣೆಯಲ್ಲಿ ಬಳಸಿದ್ದಾರೆ. ಕೇಜ್ರಿವಾಲ್​ ಈಗ ಕಾಂಗ್ರೆಸ್​​ ವಿರುದ್ಧವಾಗಿ ಆರೋಪ ಮಾಡ್ತಾರೆ. ಕೇಜ್ರಿವಾಲ್​ಗೆ ಯಾವ ನೈತಿಕತೆ ಇದೆ. ಜಾಹಿರಾತುಗಳಲ್ಲಿ ಕಿಕ್​ಬ್ಯಾಕ್​ ಪಡೆದಿರೋದು ಬಯಲಾಗಿದೆ. ಇಡಿಯಿಂದ ಚಾರ್ಜ್​ಶೀಟ್ ಕೂಡ ಮಾಡಲಾಗಿದೆ ಎಂದು ಅಜಯ್‌ ಮಾಕೆನ್‌ ಹೇಳಿದ್ದರು.

Related Video