Asianet Suvarna News Asianet Suvarna News

2 ಸ್ವದೇಶಿ ಲಸಿಕೆಗೆ ಡಿಸಿಜಿಐ ಒಕೆ, ಕೊರೊನಾ ಮುಕ್ತದೆಡೆಗೆ ಭಾರತದ ಹೆಜ್ಜೆ

ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಸ್ವದೇಶಿ ಲಸಿಕೆಗಳಾದ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳನ್ನು ದೇಶದಲ್ಲಿ ನಿರ್ಬಂಧಿತ ಪ್ರಮಾಣದಲ್ಲಿ ತುರ್ತಾಗಿ ಬಳಸಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. 

ಬೆಂಗಳೂರು (ಜ. 04): ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಸ್ವದೇಶಿ ಲಸಿಕೆಗಳಾದ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳನ್ನು ದೇಶದಲ್ಲಿ ನಿರ್ಬಂಧಿತ ಪ್ರಮಾಣದಲ್ಲಿ ತುರ್ತಾಗಿ ಬಳಸಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. 

ನಿಮಗೆ ವ್ಯಾಕ್ಸಿನ್ ಬೇಕಾ? ಹಾಗಾದ್ರೆ ಈ ಸ್ಟೆಪ್‌ಗಳನ್ನು ಫಾಲೋ ಮಾಡಿ!

ಉಳಿದ ಪ್ರಕ್ರಿಯೆಗಳು ಪೂರ್ಣಗೊಂಡರೆ ಮುಂದಿನ 8 ರಿಂದ 10 ದಿನಗಳಲ್ಲಿ ದೇಶಾದ್ಯಂತ ಲಸಿಕೆ ವಿತರಣೆ ಪ್ರಾರಂಭಿಸುವುದಾಗಿ ತಜ್ಞರು ತಿಳಿಸಿದ್ದಾರೆ. ಹೀಗಾಗಿ ಸಂಕ್ರಾಂತಿ ಹಬ್ಬದಿಂದ ಲಸಿಕೆ ಅಭಿಯಾನ ಶುರುವಾಗಲಿದ್ದು, ಪ್ರಾರಂಭಿಕ ಹಂತದಲ್ಲಿ 3 ಕೋಟಿ ಮಂದಿಗೆ ಉಚಿತವಾಗಿ ಲಸಿಕೆ ವಿತರಣೆ ನಡೆಯಲಿದೆ.