
ಸಿಲಿಂಡರ್ ಸ್ಫೋಟಕ್ಕೆ ಅಂಗಡಿ ಧಗಧಗ: ಹೊತ್ತಿಯುರಿದ ರಸ್ತೆ ಬದಿಯಲ್ಲಿದ್ದ ಟೀ ಅಂಗಡಿ..!
ಸೋಶಿಯ್ ಮೀಡಿಯಾದಲ್ಲಿ ವೈರಲ್ ಆದ ಕೆಲ ಭಯಾನಕ ವೀಡಿಯೋಗಳು ಇಲ್ಲಿವೆ. ಸಿಲಿಂಡರ್ ಸ್ಫೋಟಗೊಂಡು ರಸ್ತೆ ಬದಿ ಅಂಗಡಿ ಧ್ವಂಸಗೊಂಡಂತಹ ಘಟನೆಯೂ ಸೇರಿದಂತೆ ಹಲವು ವೀಡಿಯೋಗಳು ಇಲ್ಲಿವೆ.
ಸಿಲಿಂಡರ್ ಸ್ಫೋಟಗೊಂಡು ಅಂಗಡಿ ಹೊತ್ತಿ ಉರಿದಂತಹ ಘಟನೆ ಕೇರಳ ಮಲ್ಲಪುರಂನಲ್ಲಿ ನಡೆದಿದೆ. ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಅಂಗಡಿ ಹೊತ್ತಿ ಉರಿದಿದ್ದು, ಈ ಭಯಾನಕ ದೃಶ್ಯಾವಳಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಹಾಗೆಯೇ ಸಿಸಿಟಿವಿಯಲ್ಲಿ ಸೆರೆಯಾದ ಮತ್ತೊಂದು ಭಯಾನಕ ದೃಶ್ಯದಲ್ಲಿ ಬೈಕ್ ಸವಾರನಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೂರು ಪಲ್ಟಿಯಾಗಿ ಪಕ್ಕದಲ್ಲಿ ತೆರೆದಿದ್ದ ಚರಂಡಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ ಇದು ಸೇರಿದಂತೆ ಹಲವು ಭಯಾನಕ ವೀಡಿಯೋಗಳು ಇಲ್ಲಿವೆ.