
ಭಾರತ-ಚೀನಾ ಗಡಿ ಸಂಘರ್ಷಕ್ಕೆ ನೆಹರು ಕಾರಣ: ಕಾಂಗ್ರೆಸ್ ವಿರುದ್ಧ ಸಿ.ಟಿ. ರವಿ ವಾಗ್ದಾಳಿ
ಭಾರತ-ಚೀನಾ ಗಡಿ ಸಂಘರ್ಷಕ್ಕೆ ಜವಾಹರ್ ಲಾಲ್ ನೆಹರು ಕಾರಣ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕ ಸಿ.ಟಿ ರವಿ ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ಮಾಡಿದ ಪ್ರಮಾದದಿಂದ ಸಮಸ್ಯೆ ಈಗ ಆಗ್ತಿದೆ. ಕಾಂಗ್ರೆಸ್ ಕಾಲದಲ್ಲೇ ಮಾಡಬೇಕಾಗಿತ್ತು, ಅವರು ಮಾಡಲಿಲ್ಲ. ಕಾಶ್ಮಿರದಲ್ಲೂ ಕಾಂಗ್ರೆಸ್ ಸಣ್ಣತನ ಪ್ರದರ್ಶಿಸಿತ್ತು ಎಂದು ಸಿ.ಟಿ ರವಿ ಹೇಳಿದರು. ಭಾರತದ ಸೇನೆ ದುರ್ಬಲವಲ್ಲ, ಪ್ರತಿ ಹಂತದಲ್ಲೂ ಭಾರತೀಯ ಸೇನೆ ಬಲ ತೋರಿಸಿದೆ ಎಂದರು. ಸಂಘರ್ಷದ ಬಗ್ಗೆ ಕಾಂಗ್ರೆಸ್ ಹಗುರವಾಗಿ ಮಾತನಾಡಬಾರದು ಎಂದು ಸಿ.ಟಿ ರವಿ ಕಿಡಿ ಕಾರಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ