Corona Vaccines: ಸಾಮಾನ್ಯ ಔಷಧಿಗಳಂತೆ ಸಿಗಲಿದೆ ಲಸಿಕೆ, 1 ಡೋಸ್‌ಗೆ 275 ರು.?

ಕೋವಿಶೀಲ್ಡ್‌  (Covishield ) ಹಾಗೂ ಕೋವ್ಯಾಕ್ಸಿನ್‌ (Covaxin) ಲಸಿಕೆಗಳನ್ನು ಇತರೆ ಔಷಧಿಗಳಂತೆ ಸಾಮಾನ್ಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ)  ಅನುಮೋದನೆ ನೀಡಿದೆ.

First Published Jan 28, 2022, 11:27 AM IST | Last Updated Jan 28, 2022, 11:29 AM IST

ನವದೆಹಲಿ (ಜ. 28): ಕೋವಿಶೀಲ್ಡ್‌  (Covishield ) ಹಾಗೂ ಕೋವ್ಯಾಕ್ಸಿನ್‌ (Covaxin) ಲಸಿಕೆಗಳನ್ನು ಇತರೆ ಔಷಧಿಗಳಂತೆ ಸಾಮಾನ್ಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ)  ಅನುಮೋದನೆ ನೀಡಿದೆ. 

Covid 19: ಶಸ್ತ್ರಚಿಕಿತ್ಸೆ, ಎಮರ್ಜೆನ್ಸಿ ಇದ್ದರೆ ಕೋವಿಡ್ ಟೆಸ್ಟ್ ಅಗತ್ಯವಿಲ್ಲ

ಇದರಿಂದಾಗಿ ಈವರೆಗೆ ತುರ್ತು ಬಳಕೆಗೆ ಮಾತ್ರ ಲಭ್ಯವಿದ್ದ ಈ ಲಸಿಕೆಗಳು ಇನ್ನು ಮುಂದೆ ಕೋ-ವಿನ್‌ ಪೋರ್ಟಲ್‌ನಲ್ಲಿ ನೋಂದಾಯಿತವಾಗಿರುವ ಎಲ್ಲ ಕ್ಲಿನಿಕ್‌ಗಳು ಹಾಗೂ ಆಸ್ಪತ್ರೆಯಲ್ಲಿ ಈ ಲಸಿಕೆಗಳು ಲಭ್ಯವಾಗಲಿವೆ. 

ಕೋವ್ಯಾಕ್ಸಿನ್‌, ಕೋವಿಶೀಲ್ಡ್‌ ಲಸಿಕೆಗಳಿಗೆ ಸರ್ಕಾರ ಪ್ರತಿ ಡೋಸ್‌ಗೆ 275 ರು.ನಂತೆ ನಿಗದಿ ಮಾಡುವ ಸಾಧ್ಯತೆ ಇದೆ. ಇದರ ಜೊತೆಗೆ 150 ರು.ಗಳ ಸೇವಾ ಶುಲ್ಕ ನಿಗದಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಖಾಸಗಿ ವಲಯದಲ್ಲಿ ಕೋವ್ಯಾಕ್ಸಿನ್‌ನ ಒಂದು ಡೋಸ್‌ ಬೆಲೆ 1,200 ರು. ಮತ್ತು ಕೋವಿಶೀಲ್ಡ್‌ ಬೆಲೆ 780 ರು. ನಿಗದಿ ಮಾಡಲಾಗಿದೆ. ಇದರಲ್ಲಿ 150 ರು. ಸೇವಾ ಶುಲ್ಕ ಕೂಡಾ ಸೇರಿದೆ.