ವಿಶ್ವದ ಮೊದಲ ಕೊರೊನಾ ವ್ಯಾಕ್ಸಿನ್ ತಯಾರಿಸಿದೆ ರಷ್ಯಾ; ಹುಟ್ಟಿಕೊಂಡಿದೆ ಭಯ, ಅನುಮಾನ..!

ಆರು ತಿಂಗಳಿಗೂ ಹೆಚ್ಚು ಕಾಲದಿಂದ ಜಗತ್ತನ್ನು ಕಾಡುತ್ತಿರುವ ಕೊರೋನಾ ವೈರಸ್‌ ಮಹಾಮಾರಿಗೆ ಜಗತ್ತಿನ ಮೊದಲ ಲಸಿಕೆಯನ್ನು ರಷ್ಯಾ ಘೋಷಿಸಿದೆ. ಇದರೊಂದಿಗೆ, 7.5 ಲಕ್ಷಕ್ಕೂ ಅಧಿಕ ಜನರನ್ನು ಬಲಿ ಪಡೆದಿರುವ, 2 ಕೋಟಿಗೂ ಹೆಚ್ಚು ಜನರಿಗೆ ಸೋಂಕು ತಗುಲಿಸಿರುವ ಮತ್ತು ಜಾಗತಿಕ ಆರ್ಥಿಕತೆಯಲ್ಲಿ ಅಲ್ಲೋಲ-ಕಲ್ಲೋಲ ಉಂಟುಮಾಡಿರುವ ವೈರಸ್ಸನ್ನು ಎದುರಿಸಲು ಮೊಟ್ಟಮೊದಲ ಅಸ್ತ್ರ ಸಿಕ್ಕಂತಾಗಿದೆ.

First Published Aug 12, 2020, 2:52 PM IST | Last Updated Aug 12, 2020, 2:52 PM IST

ಬೆಂಗಳೂರು (ಆ. 12): ಆರು ತಿಂಗಳಿಗೂ ಹೆಚ್ಚು ಕಾಲದಿಂದ ಜಗತ್ತನ್ನು ಕಾಡುತ್ತಿರುವ ಕೊರೋನಾ ವೈರಸ್‌ ಮಹಾಮಾರಿಗೆ ಜಗತ್ತಿನ ಮೊದಲ ಲಸಿಕೆಯನ್ನು ರಷ್ಯಾ ಘೋಷಿಸಿದೆ. ಇದರೊಂದಿಗೆ, 7.5 ಲಕ್ಷಕ್ಕೂ ಅಧಿಕ ಜನರನ್ನು ಬಲಿ ಪಡೆದಿರುವ, 2 ಕೋಟಿಗೂ ಹೆಚ್ಚು ಜನರಿಗೆ ಸೋಂಕು ತಗುಲಿಸಿರುವ ಮತ್ತು ಜಾಗತಿಕ ಆರ್ಥಿಕತೆಯಲ್ಲಿ ಅಲ್ಲೋಲ-ಕಲ್ಲೋಲ ಉಂಟುಮಾಡಿರುವ ವೈರಸ್ಸನ್ನು ಎದುರಿಸಲು ಮೊಟ್ಟಮೊದಲ ಅಸ್ತ್ರ ಸಿಕ್ಕಂತಾಗಿದೆ.

ರಷ್ಯಾ ಲಸಿಕೆಗೆ 20 ದೇಶಗಳ ಬೇಡಿಕೆ: ಯಾರಿಗೆ ಮೊದಲು ಲಸಿಕೆ?

ವಿಶ್ವಾದ್ಯಂತ ಕೊರೋನಾಗೆ ಲಸಿಕೆ ಅಭಿವೃದ್ಧಿಪಡಿಸುವ ಪ್ರಯತ್ನ 100ಕ್ಕೂ ಹೆಚ್ಚು ಕಡೆ ನಡೆಯುತ್ತಿದೆ. ಆ ಪೈಕಿ ಈಗಾಗಲೇ 6 ಲಸಿಕೆಗಳು ಮೂರನೇ ಹಂತದ ಕ್ಲಿನಿಕಲ್‌ ಟ್ರಯಲ್‌ ಹಂತ ತಲುಪಿವೆ. ಆದರೆ, ಅದರಲ್ಲಿ ರಷ್ಯಾ ಲಸಿಕೆಯೇ ಇರಲಿಲ್ಲ. ಆದಾಗ್ಯೂ ರಷ್ಯಾ ತಾನು ಲಸಿಕೆ ಅಭಿವೃದ್ಧಿಪಡಿಸಿರುವುದಾಗಿ ಹೇಳಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಮೂರನೇ ಹಂತದ ಕ್ಲಿನಿಕಲ್‌ ಪರೀಕ್ಷೆಯನ್ನು ಸಹಸ್ರಾರು ಜನರ ಮೇಲೆ ನಡೆಸಬೇಕಾಗುತ್ತದೆ. ಒಂದು ವರದಿಯ ಪ್ರಕಾರ, 3ನೇ ಹಂತದ ಪ್ರಯೋಗ ರಷ್ಯಾದಲ್ಲಿ ಪೂರ್ಣವಾಗಿಲ್ಲ. ಅದನ್ನು ವಿವಿಧ ದೇಶಗಳಲ್ಲಿ ಮಾಡುವುದಾಗಿ ಹೇಳುತ್ತಿದೆ. ಹೀಗಾಗಿ ಈ ಲಸಿಕೆ ಬಗ್ಗೆ ಅಮೆರಿಕದಂತಹ ದೇಶಗಳು ಕಳವಳ ವ್ಯಕ್ತಪಡಿಸುತ್ತಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!