ಕೈ ನಾಯಕಿ ಪೊಲೀಸ್ ಕೊರಳ ಪಟ್ಟಿ ಹಿಡಿದಿದ್ದೇಕೆ?

ಇ.ಡಿ ವಿಚಾರಣೆ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಹೈದರಾಬಾದ್‌ನಲ್ಲಿ ನಡೆದ ರಾಜ್‌ ಭವನ್‌ ಚಲೋ ವೇಳೆ ಕಾಂಗ್ರೆಸ್‌ ನಾಯಕಿ ರೇಣುಕಾ ಚೌಧರಿ ಪೊಲೀಸರ ಕಾಲರ್‌ಗೆ ಕೈಹಾಕಿದ ವಿಡಿಯೋ ವೈರಲ್ ಆಗಿದೆ.
 

Share this Video
  • FB
  • Linkdin
  • Whatsapp

ಹೈದರಾಬಾದ್ (ಜೂನ್ 16): ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ(National Herald case) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ (Congress Leader Rahul Gandhi) ವಿಚಾರಣೆಯನ್ನು ಜಾರಿ ನಿರ್ದೇಶನಾಲಯ (ED) ನಡೆಸುತ್ತಿದೆ. ಒಂದೆಡೆ, ರಾಹುಲ್ ಗಾಂಧಿ ವಿಚಾರಣೆ ಇಡಿ ಕಚೇರಿಯ ಒಳಗಡೆ ನಡೆಯುತ್ತಿದ್ದರೆ, ಹೊರಗಡೆ ಕಾಂಗ್ರೆಸ್ ಕಾರ್ಯಕರ್ತರು ದೇಶವ್ಯಾಪಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಗುರುವಾರ ಕಾಂಗ್ರೆಸ್ ಪಕ್ಷ ಎಲ್ಲಾ ರಾಜ್ಯದಲ್ಲಿ ರಾಜಭವನ ಚಲೋ ( Raj Bhavan Chalo ) ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ವೇಳೆ, ಕಾಂಗ್ರೆಸ್ ಹಿರಿಯ ನಾಯಕಿ ರೇಣುಕಾ ಚೌಧರಿ (Renuka Chowdhury) ಪೊಲೀಸರೊಬ್ಬರ ಕೊರಳಪಟ್ಟಿಗೆ ಕೈ ಹಾಕುವ ಮೂಲಕ ಪ್ರಮಾದ ಎಸಗಿದ್ದಾರೆ. 

ಪ್ರತಿಭಟನೆ ವೇಳೆ ಪೊಲೀಸರ ಕಾಲರ್ ಹಿಡಿದು ಎಳೆದಾಡಿದ ಕೈ ನಾಯಕಿ ರೇಣುಕಾ ಚೌಧರಿ

ಪ್ರತಿಭಟನೆ ಹೆಸರಲ್ಲಿ ಪೊಲೀಸರ ಮೇಲೆ ದಬ್ಬಾಳಿಕೆ ನಡೆಸಿದ ರೇಣುಕಾ ಚೌಧರಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರ ಕೊರಳಪಟ್ಟಿಗೆ ಕೈ ಹಾಕಿ ದರ್ಪ ತೋರಿದ ರೇಣುಕಾ ಚೌಧರಿ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ, ಕಾಂಗ್ರೆಸ್ ನಾಯಕಿ ಈ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ.

Related Video