ಪ್ರತಿಭಟನೆ ವೇಳೆ ಪೊಲೀಸರ ಕಾಲರ್ ಹಿಡಿದು ಎಳೆದಾಡಿದ ಕೈ ನಾಯಕಿ ರೇಣುಕಾ ಚೌಧರಿ
ಹೈದರಾಬಾದ್‌ನಲ್ಲಿ ಪ್ರತಿಭಟನೆ ವೇಳೆ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಪೊಲೀಸರ ಕಾಲರ್ ಹಿಡಿದು ಎಳೆದಾಡಿದ್ದಾರೆ. ರೇಣುಕಾ ಪೊಲೀಸರ ಕಾಲರ್ ಹಿಡಿದು ಎಳೆದಾಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ ವ್ಯಾಪಕ ಆಕ್ರೋಶ ಕೇಳಿ ಬಂದಿದೆ.
ಹೈದರಾಬಾದ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಇಡಿ ಸಮನ್ಸ್ ಜಾರಿಗೊಳಿಸಿರುವುದನ್ನು ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಪ್ರತಿಭಟನೆ ವೇಳೆ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಪೊಲೀಸರ ಕಾಲರ್ ಹಿಡಿದು ಎಳೆದಾಡಿದ್ದಾರೆ. ರೇಣುಕಾ ಪೊಲೀಸರ ಕಾಲರ್ ಹಿಡಿದು ಎಳೆದಾಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ ವ್ಯಾಪಕ ಆಕ್ರೋಶ ಕೇಳಿ ಬಂದಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಪ್ರಶ್ನಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಗುರುವಾರ ಹೈದರಾಬಾದ್‌ನ (Hyderabad) ರಾಜಭವನದ (Raj Bhavan) ಬಳಿ ಪ್ರತಿಭಟನೆ ನಡೆಸುತ್ತಿದ್ದರು. ಈ ಪ್ರತಿಭಟನೆ ನಂತರ ವಿಕೋಪಕ್ಕೆ ತಿರುಗಿತ್ತು. ಸುದ್ದಿ ಸಂಸ್ಥೆ ಎಎನ್‌ಐ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಪ್ರತಿಭಟನೆಯ ವೀಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ (Renuka Chowdhury) ಅವರನ್ನು ಪೊಲೀಸರು ಸ್ಥಳದಿಂದ ಕರೆದೊಯ್ಯಲು ಯತ್ನಿಸಿದಾಗ ಅವರು ಪೊಲೀಸೊಬ್ಬರ ಶರ್ಟ್ ಕಾಲರ್‌ಗೆ ಕೈ ಹಾಕಿ ಎಳೆದಾಡುತ್ತಿರುವುದನ್ನು ಕಾಣಬಹುದು.
ಕಿತ್ನೇ ಆದ್ಮೀ ಥೇ?: ರೇಪ್ ಕುರಿತ ರೇಣುಕಾ ಚೌಧರಿ ಹೇಳಿಕೆಯಿಂದ ವಿವಾದ
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಚೌಧರಿ, ಪೊಲೀಸರು ಹಿಂದಿನಿಂದ ನಮ್ಮನ್ನು ತಳ್ಳಲು ಆರಂಭಿಸಿದರು. ಈ ವೇಳೆ ನಾವು ಮತ್ತೆ ಹಿಂದೆ ಸರಿದಾಗ ಮತ್ತೆ ತಳ್ಳಲು ಪ್ರಾರಂಭಿಸಿದರು. ಈ ವೇಳೆ ನನ್ನ ಸಮತೋಲನವೂ ತಪ್ಪಿದ್ದು ಮರಳಿ ಪಡೆಯಲು ಪೊಲೀಸರ ಭುಜದ ಮೇಲೆ ಮೇಲೆ ಕೈ ಇಟ್ಟೆ. ನಾನು ಹಿಂದಿನಿಂದ ತಳ್ಳಲ್ಪಟ್ಟೆ, ನಾನು ಬೀಳುತ್ತಿದ್ದೆ, ನಾನು ಬೀಳದಂತೆ ಹೆಗಲನ್ನು ಹಿಡಿಯಲು ಪ್ರಯತ್ನಿಸುತ್ತಿದ್ದೆ ಎಂದು ಅವಳು ಹೇಳಿದಳು.
ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ಮತ್ತು ಪಕ್ಷದ ಸಂಸದ ಎ ರೇವಂತ್ ರೆಡ್ಡಿ (A Revanth Reddy) , ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮಲ್ಲು ಭಟ್ಟಿ ವಿಕ್ರಮಾರ್ಕ (Mallu Bhatti Vikramarka) ಮತ್ತು ಹಲವರನ್ನು ಪೊಲೀಸರು ರಾಜಭವನದತ್ತ ಸಾಗುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಟಿಕೆಟ್ ವಂಚನೆ ಕೇಸಲ್ಲಿ ರೇಣುಕಾ ಚೌಧರಿ ವಿರುದ್ಧ ಜಾಮೀನು ರಹಿತ ವಾರೆಂಟ್
ಪ್ರತಿಭಟನೆಯಿಂದಾಗಿ ಖೈರ್ತಾಬಾದ್ ವೃತ್ತ (Khairtabad Circle) ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ (traffic jam) ಉಂಟಾಗಿತ್ತು. ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ವರದಿಯಾಗಿದೆ ಮತ್ತು ಕೆಲವು ಪ್ರತಿಭಟನಾಕಾರರು ಸರ್ಕಾರಿ ಸಿಟಿ ಬಸ್‌ನಲ್ಲಿ ಹತ್ತುತ್ತಿರುವುದು ಕಂಡುಬಂದಿದೆ. ಕೆಲವು ಪ್ರತಿಭಟನಾಕಾರರು ಬಸ್‌ನ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದಾರೆ ಎಂದು ತಿಳಿದು ಬಂದಿದೆ.
51 ವರ್ಷದ ರಾಹುಲ್ ಗಾಂಧಿ (Rahul Gandhi) ಅವರನ್ನು ಸೋಮವಾರದಿಂದ (ಜೂನ್ 13) ಸತತ ಮೂರು ದಿನಗಳ ಕಾಲ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಮತ್ತು ಶುಕ್ರವಾರ (ಜೂನ್ 17)ಕೇಂದ್ರ ದೆಹಲಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ( APJ Abdul Kalam Road) ಇಡಿ ಪ್ರಧಾನ ಕಚೇರಿಗೆ ಮತ್ತೆ ವಿಚಾರಣೆಗೆ ಬರುವಂತೆ ಸೂಚನೆ ನೀಡಲಾಗಿದೆ. ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಅವರ ಹೇಳಿಕೆಯನ್ನು ಅನೇಕ ಸೆಷನ್‌ಗಳಲ್ಲಿ ದಾಖಲಿಸಲಾಗಿದೆ ಮತ್ತು ಬುಧವಾರವೂ ನಡೆದ ವಿಚಾರಣೆಯೂ ಸೇರಿದಂತೆ ಅವರು ಇಡಿ ತನಿಖಾಧಿಕಾರಿಗಳೊಂದಿಗೆ ಸುಮಾರು 30 ಗಂಟೆಗಳ ಕಾಲ ಕಳೆದಿದ್ದಾರೆ.