ನಮ್ ಮಗ ಹಂಗಿಲ್ಲ, ತಪ್ಪೇ ಮಾಡಿಲ್ಲ, ಮೋಸ್ಟ್ ವಾಂಟೆಡ್ ಉಗ್ರ ಮತೀನ್ ಪೋಷಕರ ಪ್ರತಿಕ್ರಿಯೆ!

 ಪಂಪ್‌ವೆಲ್‌ನಲ್ಲಿ ಬ್ಲಾಸ್ಟ್ ಮಾಡಲು ಪ್ಲಾನ್, ಶಾರೀಖ್ ಸಂಚು ಬಯಲು, ಗ್ರರ ಅಡಗುತಾಣವಾಗುತ್ತಿದೆಯಾ ಶಿವಮೊಗ್ಗದ ತೀರ್ಥಹಳ್ಳಿ, ಮಂಗಳೂರು ಸ್ಫೋಟ ಹಿಂದೂ ತಲೆಗೆ ಕಟ್ಟಲು ಪ್ಲಾನ್ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ಕಳೆದ 3 ವರ್ಷದಿಂದ ತಲೆ ತಪ್ಪಿಸಿಕೊಂಡಿರುವ ಉಗ್ರ ಮತೀನ್ ಹುಡುಕಿ ಕೊಟ್ಟವರಿಗೆ NIA ಮೂರು ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. 2019ರಲ್ಲಿ ತಮಿಳುನಾಡಿನ ಆರ್‌ಎಸ್‌ಎಸ್ ನಾಯಕನ ಹತ್ಯೆಯಲ್ಲಿ ಮತೀನ್ ಹೆಸರು ಕೇಳಿ ಬಂದಿತ್ತು. ಬಳಿಕ ಮತೀನ್ ನಾಪತ್ತೆಯಾಗಿದ್ದಾನೆ. ಬಳಿಕ ಕೊಯಮತ್ತೂರು ಸ್ಫೋಟ, ಇದೀಗ ಮಂಗಳೂರಿನಲ್ಲಿ ನಡೆದ ಬ್ಲಾಸ್ಟ್ ಪ್ರಕರಣ ಮಾಸ್ಟರ್ ಮೈಂಡ್ ಆಗಿ ಮತೀನ್ ಕೆಲಸ ಮಾಡಿರುವ ಶಂಕೆ ಬಲಗೊಳ್ಳುತ್ತಿದೆ. ಆದರೆ ಈ ಮತೀನ್ ತಂದೆ ನಿವೃತ್ತ ಯೋಧರಾಗಿದ್ದಾರೆ. ಮತೀನ್ ಚಿಕ್ಕ ತಪ್ಪು ಮಾಡಿಲ್ಲ. ನಮ್ಮ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಎಂದು ಪೋಷಕರು ಗ್ರೀನ್ ಸರ್ಟಿಫಿಕೇಟ್ ನೀಡಿದ್ದಾರೆ. ಇತ್ತ ಮಂಗಳೂರು ಬ್ಲಾಸ್ಟ್ ಪ್ರಕರಣದ ಉಗ್ರ ಶಾರೀಖ್ ಹಿಂದೂ ಬಟ್ಟೆ, ಹಿಂದೂ ದಾರ, ಮೊಬೈಲ್‌ನಲ್ಲಿ ಶಿವನಫೋಟೋ ಇಟ್ಟುಕೊಂಡಿದ್ದ. ಈ ಮೂಲಕ ಈ ಪ್ರಕರಣವನ್ನು ಹಿಂದೂಗಳ ತಲೆಗೆ ಕಟ್ಟಲು ಮಾಸ್ಟರ್ ಪ್ಲಾನ್ ರೆಡಿಯಾಗಿತ್ತು.

Related Video