ಕೊಯಮತ್ತೂರು ಸ್ಫೋಟ ಪ್ರಕರಣ, ದೀಪಾವಳಿ ಸಂಭ್ರಮದ ನಡುವೆ ಆತ್ಮಾಹುತಿ ದಾಳಿ ಸಂಚು ಬಯಲು!
ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾದ ಬೆನ್ನಲ್ಲೇ ಭಾರತದಲ್ಲಿ ರಾಜಕೀಯ ಶುರುವಾಗಿದೆ. ಮುಸ್ಲಿಮ್ ಪ್ರಧಾನಿ, ಮುಸ್ಲಿಮ್ ರಾಷ್ಟ್ರಪತಿ ಸೇರಿದಂತೆ ಹಲವು ವಾದಗಳು ಮುನ್ನಲೆಗೆ ಬಂದಿದೆ. ಇತ್ತ ಶಿವಮೊಗ್ಗದಲ್ಲಿ ಮತ್ತೆ ಹಿಂದೂ ಕಾರ್ಯಕರ್ತನ ಮೇಲೆ ದಾಳಿ, ಬಂಡೇಮಠ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ ಸೇರಿದಂತೆ ಇಂದಿನ ಇಡೀ ದಿನದ ಕಂಪ್ಲೀಟ್ ಸುದ್ದಿ ವಿಡಿಯೋ ಇಲ್ಲಿದೆ
ತಮಿಳುನಾಡಿನ ಕೊಯಮತ್ತೂರಿನಲ್ಲಿ ಮಾರುತಿ 800 ಕಾರು ಸ್ಫೋಟ ಪ್ರಕರಣ ಆರಂಭದಲ್ಲಿ ಸಿಲಿಂಡರ್ ಸ್ಫೋಟ ಎಂದು ಷರಾ ಬರೆಯಲಾಗಿತ್ತು.ಈ ಕಾರಿನಲ್ಲಿದ್ದ ಜುಮೇಜಾ ಮುಬೀನ್ ಸುಟ್ಟು ಕರಕಲಾಗಿದ್ದ. ಆದರೆ ತನಿಖೆಗೆ ಇಳಿದ ಪೊಲೀಸರಿಗೆ ಅಚ್ಚರಿಯಾಗಿದೆ. ಕಾರಣ ದೀಪಾವಳಿಗೆ ಆತ್ಮಾಹುತಿ ಕಾರು ದಾಳಿಗೆ ತಯಾರಿ ಮಾಡುತ್ತಿದ್ದ ವೇಳೆ ಈ ಸ್ಫೋಟ ಸಂಭವಿಸಿದೆ ಅನ್ನೋದು ಇದೀಗ ಬಲವಾಗುತ್ತಿದೆ. ಜುಮೇಜಾ ಮುಬೀನ್ ಮನೆ ಮೇಲೆ ದಾಳಿ ಮಾಡಿದ ಪೊಲೀಸರಿಗೆ ಹಲವು ಪೂರಕ ದಾಖಲೆಗಳು ಲಭ್ಯವಾಗಿದೆ. ಮೃತ ಜುಮೇಜಾ ಮುಬೀನ್‌ಗೆ ಐಸಿಸ್ ಲಿಂಕ್ ಬಯಲಾಗಿದೆ. ಸ್ಫೋಟದ ಹಿಂದೆ ಐಸಿಸ್ ಉಗ್ರರ ಲಿಂಕ್ ಪತ್ತೆಯಾಗಿದೆ. ತನಿಖೆ ವೇಳೆ ಪೊಲೀಸರಿಗೆ ಸಿಕ್ಕ ಮಾಹಿತಿಯೇನು?