Asianet Suvarna News Asianet Suvarna News

ಕೊಯಮತ್ತೂರು ಕಾರು ಸ್ಫೋಟ ಪ್ರಕರಣ, ತನಿಖೆಯಲ್ಲಿ ಬಯಲಾದ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಕಮಿಷನರ್!

ಕೊಯಮತ್ತೂರು ಕಾರು ಸ್ಫೋಟ ಪ್ರಕರಣದ ತನಿಖೆಯಲ್ಲಿ ಮತ್ತಷ್ಟು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಈ ಮಾಹಿತಿಗಳನ್ನು ಸ್ವತಃ ಕೊಯಮತ್ತೂರು ಪೊಲೀಸ್ ಕಮಿಷನರ್ ಏಷ್ಯಾನೆಟ್ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ.

First Published Oct 28, 2022, 5:54 PM IST | Last Updated Oct 28, 2022, 5:54 PM IST

ಕೊಯಮತ್ತೂರು ಕಾರು ಸ್ಫೋಟ ಪ್ರಕರಣದಲ್ಲಿ 6 ಆರೋಪಿಗಳನ್ನು ಬಂಧಿಸಲಾಗಿದೆ. ಐವರನ್ನು ತನಿಖೆಗೆ ಒಳಪಡಿಸಿ ಮಹತ್ವದ ಮಾಹಿತಿ ಕಲೆಹಾಕಿರುವ ಪೊಲೀಸರು ಇದೀಗ ಹಲವು ಸಂಸ್ಥೆಗಳಿಂದ ವಿವರಗಳನ್ನು ಕೇಳಿದೆ. ಕಾರು ಸ್ಫೋಟದಲ್ಲಿ ಶಂಕಿತ ಜೆಮಿಶಾ ಮುಬೀನ್‌ ಮೃತಪಟ್ಟಿದ್ದ. ಈ ಸ್ಪೋಟದಲ್ಲಿ ಉಗ್ರರ ಕೈವಾಡವಿದೆ ಅನ್ನೋದಕ್ಕೆ ಹಲವು ಸಾಕ್ಷ್ಯಗಳು ಲಭ್ಯವಾಗಿದೆ. ಈ ಕುರಿತು ಕೊಯಮತ್ತೂರು ಪೊಲೀಸ್ ಕಮಿಷನರ್ ವಿ ಬಾಲಕೃಷ್ಣನ್ ಏಷ್ಯಾನೆಟ್ ನ್ಯೂಸ್ ಜೊತೆ ತನಿಖಾ ವಿವರಗಳನ್ನು ಹಂಚಿಕೊಂಡಿದ್ದಾರೆ. ಆರೋಪಿಗಳು ಸ್ಫೋಟಕ್ಕೆ ಬೇಕಾದ ವಸ್ತುಗಳು ಆನ್‌ಲೈನ್ ಶಾಂಪಿಂಗ್ ಮೂಲಕ ತರಿಸಿಕೊಂಡಿರುವ ಮಾಹಿತಿ ಕುರಿತು ಫ್ಲಿಪ್‌ಕಾರ್ಟ್ ಹಾಗೂ ಅಮೇಜಾನ್‌ನಿಂದ ಮಾಹಿತಿ ಕೇಳಿದೆ. ಇತ್ತ ಆರೋಪಿಗಳು ಕೇರಳದ ಜೈಲಿನಲ್ಲಿರುವ ಕೆಲವರನ್ನು ಭೇಟಿಯಾಗಿರುವ ಮಾಹಿತಿಯನ್ನು ಕಲೆಹಾಕಿದ್ದಾರೆ. ಈ ಕುರಿತು ಪೊಲೀಸ್ ಕಮಿಷನರ್ ಬಿಚ್ಚಿಟ್ಟ ಮಾಹಿತಿ ಇಲ್ಲಿದೆ.
 

Video Top Stories