ನಿಷೇಧಿತ ಸಿಮಿ ಸಂಘಟನೆ ನಾಯಕರಿಂದ ಹುಟ್ಟಿದ ಪಿಎಫ್ಐ ಬ್ಯಾನ್, 2017ರಲ್ಲಿ ನೀಡಿತ್ತು ವರದಿ!

ಪಿಎಫ್ಐ ಸಂಸ್ಥೆಯ ರಾಜಕೀಯ ವಿಭಾಗ ಎಸ್‌ಡಿಪಿಐ ಘಟಕ. ಆದರೆ ಪಿಎಫ್ಐ ನಿಷೇಧದಲ್ಲಿ ಎಸ್‌ಡಿಪಿಐ ಪಕ್ಷವನ್ನು ಬ್ಯಾನ್ ಮಾಡಿಲ್ಲ. ಇದಕ್ಕೆ ಒಂದು ಕಾರಣವೂ ಇದೆ.   ಪಿಎಫ್ಐ ಅಸಲಿಯತ್ತು, ದಾಳಿ, ನಿಷೇಧ ಸೇರಿದಂತೆ ಇಂದಿನ ಸಂಪೂರ್ಣ ಬೆಳವಣಿಗೆ ಇಲ್ಲಿದೆ.
 

First Published Sep 28, 2022, 11:13 PM IST | Last Updated Sep 28, 2022, 11:13 PM IST

ಪಿಎಫ್ಐ ನಿಷೇಧಕ್ಕೆ 2017ರಲ್ಲಿ ಎನ್ಐಎ ಕೇಂದ್ರ ಸರ್ಕಾರಕ್ಕೆ ವರದಿ ನೀಡಿತ್ತು. ಕೇರಳದ ಕಣ್ಣೂರಿನಲ್ಲಿ ನಡೆದ ಭಯೋತ್ಪಾದಕ ತರಬೇತಿ ನಡೆಯುವ ಮಾಹಿತಿ ಪಡೆದ ಎನ್ಐಎ ದೇಶಾದ್ಯಂತ ಪಿಎಫ್ಐ ಮೇಲೆ ಹದ್ದಿನ ಕಣ್ಣಿಟ್ಟಿತು. ಕೇರಳದಿಂದ ಐಸಿಸ್ ಸೇರಿದ ಯುವಕರ ಸಂಖ್ಯೆಯನ್ನೂ ವರದಿಯಲ್ಲಿ ಹೇಳಿದೆ. ನಿಷೇಧಿತ ಸಿಮಿ ಸಂಘಟನೆಯ ಸಂಸ್ಥಾಪಕ ಸದಸ್ಯರೆಲ್ಲಾ ಸೇರಿ ಪಿಎಫ್ಐ ಸಂಸ್ಥೆಯನ್ನು ಕಟ್ಟಿದ್ದಾರೆ. ಅಲ್ಲಿನ ಬಹುತೇಕ ಪ್ರಮುಖ ನಾಯಕರು ಪಿಎಫ್ಐ ಸಂಘಟನೆಯಲ್ಲಿ ಪ್ರಮುಖ ಹುದ್ದೆ ನಿರ್ವಹಿಸುತ್ತಿದ್ದಾರೆ.  ಪಿಎಫ್ಐ ನಿಷೇಧ, ನಾಯಕ ಪ್ರತಿಕ್ರಿಯೆ, ಎಸ್‌ಡಿಪಿಐ ಮುಖಂಡರಿಂದ ಸೊಬಗರ ಪೋಸ್ ಸೇರಿದಂತೆ ಸಂಪೂರ್ಣ ಬೆಳವಣಿಗೆ ಇಲ್ಲಿದೆ.