Bridge collapse: ಭಕ್ತರ ಪಾಲಿಗೆ ಸಾವಿನ ಸೇತುವೆಯಾದ ಮಚ್ಚು ನದಿಯ ಸೇತುವೆ! ಕಳಪೆ ಗುಣಮಟ್ಟದ ಕಾಮಗಾರಿಯೇ ಈ ದುರಂತಗಳಿಗೆ ಕಾರಣ..!
ಸರಣಿ ಸೇತುವೆಗಳ ಸಮಾಧಿ ಹಿಂದೆ ಇರೋ ಕೊಲೆಗಾರ ಯಾರು..?
ಇಡೀ ದೇಶವನ್ನೇ ಬೆಚ್ಚಿಬೀಳಿಸಿದ 2019 ಸೇತುವೆ ಕುಸಿತ ಘಟನೆ..!
ಪಾದಚಾರಿಗಳ ಮೇಲೆ ಒಮ್ಮಿಂದೊಮ್ಮೆ ಕುಸಿದು ಬಿದ್ದ ಸೇತುವೆ..!
ಭಾರತ, ಜಲಸಮಾಧಿ ಆಗ್ಹೋಗಿದ್ದಂತಿದೆ. ಉತ್ತರ ಭಾರತದ ಉತ್ತರಾಖಂಡ್, ಹಿಮಾಚಲ ಪ್ರದೇಶ ಸೇರಿದಂತೆ ಇನ್ನೂ ಅನೇಕ ಪ್ರದೇಶಗಳು ಪದೇ ಪದೇ ಜಲಾಘಾತಕ್ಕೆ ಗುರಿಯಾಗಿ ನರಳಾಡ್ತಿದೆ. ಹಿಂದೆಂದೂ ಕಂಡು ಕೇಳರಿಯದಂತ ಪ್ರಕೃತಿಯ ಈ ರೌದ್ರರೂಪ ನೋಡ್ತಿದ್ರೆ, ಸದ್ಯಕ್ಕೆ ಯಾರೂ ಸುರಕ್ಷಿತವಾಗಿಲ್ಲ ಅನ್ನೊದು ಎಲ್ಲರಿಗೂ ಅರ್ಥ ಆಗಿ ಹೋಗಿದೆ. ಪ್ರವಾಹಸುರ ವಕ್ಕರಿಸಿಕೊಂಡಾಗೆಲ್ಲ ಸೇತುವೆಗಳು ಕೊಚ್ಚಿ ಹೋಗ್ತಾನೇ ಇರುತ್ತೆ. ಆಗ ಜನ ಹಾಕೋ ಶಾಪ ಒಂದೆರಡಲ್ಲ. ಆದರೆ ಬಿಹಾರ್‌ನಲ್ಲಿ(Bihar) ಮಾತ್ರ ಪರಿಸ್ಥಿತಿ ಕೊಂಚ ನಿಗೂಢವಾಗಿದೆ. ಕಾರಣ ಅಲ್ಲಿ ಭಾರೀ ಮಳೆ ಏನೂ ಇಲ್ಲ. ಪ್ರವಾಹದ(Flood) ಅಬ್ಬರವೂ ಇಲ್ಲಾ ಆದರೂ ಮೂರೇ ಮೂರು ವಾರದಲ್ಲಿ 13ಕ್ಕೂ ಹೆಚ್ಚು ಸೇತುವೆಗಳು ಕುಸಿದು ಬಿದ್ದು ಸಮಾಧಿ ಆಗ್ಹೋಗ್ಬಿಟ್ಟಿದೆ. ಇಲ್ಲಿ ನೋಡಿ ಕೋಟಿ ಕೋಟಿ ಖರ್ಚು ಮಾಡಿ ಕಟ್ಟಲಾಗಿರುವ ಸೇತುವೆಗಳ ದುರ್ದೆಸೆ ಹೇಂಗಿದೆ ಅಂತ. ಕೆಲವೇ ಕೆಲವು ನಿಮಿಷಗಳು ಅಷ್ಟೇ. ಕಣ್ಮುಂದೆಯೇ ಕುಸಿದು ಬಿದ್ದಿತ್ತು ದೊಡ್ಡ ದೊಡ್ಡ ಆಕಾರದ ಸೇತುವೆಗಳು. ಈಗ ಸೇತುವೆಗಳಿರೋ(Bridges) ಜಾಗದಲ್ಲಿ ಇರೋದು ಕೇವಲ ಸಿಮೆಂಟ್, ಕಲ್ಲು ಹಾಗೂ ಕಾಂಕ್ರಿಟ್‌ನ ಧೂಳೂ ಮಣ್ಣಿನ ರಾಶಿ ಅಷ್ಟೆ. ಇದೇನು ಅಂತಿಂಥ ಸೇತುವೆಯಲ್ಲ, ಸುಮಾರು 12 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದ ಸೇತುವೆ. ಇದಕ್ಕಾಗಿ ಕೋಟಿ-ಕೋಟಿ ಖರ್ಚು ಮಾಡಿದ್ರೂ, ಕ್ಷಣಾರ್ಧದಲ್ಲಿ ಬಖರಾ ನದಿಯಲ್ಲಿ ಬಿದ್ದು ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಬಿಟ್ಟಿತ್ತು.
ಇದನ್ನೂ ವೀಕ್ಷಿಸಿ: Today Horoscope: ಈ ರಾಶಿಯವರಿಗೆ ಇಂದು ವ್ಯಥೆಯ ದಿನವಾಗಿದ್ದು, ಮಾನಸಿಕವಾಗಿ ಕುಗ್ಗುವಿರಿ..