ಸಾಯುವ ಆಸೆ ಇದ್ದರೆ ಈ ವಿಮಾನಗಳನ್ನ ಹತ್ತಬೇಕಾ? ಗುಜರಾತ್​ ವಿಮಾನ ದುರಂತದ ಬೆನ್ನಲ್ಲೇ ಹೊಸಚರ್ಚೆ!

ಲಂಡನ್‌ಗೆ ಹೊರಟಿದ್ದ ಬೋಯಿಂಗ್ ಡ್ರೀಮ್‌ಲೈನರ್ ವಿಮಾನ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು 230 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಈ ದುರಂತವು ಬೋಯಿಂಗ್ 787 ವಿಮಾನದ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Share this Video
  • FB
  • Linkdin
  • Whatsapp

ಅಹಮದಾಬಾದ್‌: ಗುರುವಾರ ಮಧ್ಯಾಹ್ನ 230 ಪ್ರಯಾಣಿಕರು ಹಾಗೂ 12 ಸಿಬ್ಬಂದಿಗಳನ್ನು ಹೊತ್ತು ಲಂಡನ್‌ಗೆ ಸಾಗುತ್ತಿದ್ದ ಬೋಯಿಂಗ್ ಡ್ರೀಮ್‌ಲೈನರ್ ವಿಮಾನವು ಟೇಕ್‌ಆಫ್ ಆದ ಕೆಲವೇ ಸೆಕೆಂಡ್‌ಗಳಲ್ಲಿ ಪತನಗೊಂಡು ಭೀಕರ ದುರ್ಘಟನೆ ನಡೆದಿದೆ. ಇದು ದೇಶದ ಇತಿಹಾಸದಲ್ಲೇ ಎರಡನೇ ಅತಿದೊಡ್ಡ ವೈಮಾನಿಕ ದುರಂತ ಎನಿಸಿಕೊಂಡಿದೆ.

ಇದರ ಬೆನ್ನಲ್ಲೇ ಬೋಯಿಂಗ್‌ 787 ವಿಮಾನದ ಸುರಕ್ಷತೆಯ ಬಗ್ಗೆ ಹೊಸ ಚರ್ಚೆಗಳು ಶುರುವಾಗಿವೆ. ಈ ವಿಮಾನವನ್ನು ಕಾರ್ಬನ್ ಪೈಬರ್ ಹಾಗೂ ಪಾಲಿಮರ್ ಬಳಸಿ ಇದರ ಬಾಡಿ ನಿರ್ಮಾಣ ಮಾಡಲಾಗುತ್ತದೆ. ಇಂಧನ ದಕ್ಷತೆ ಮಾಡುವ ಉದ್ದೇಶದಿಂದ ವಿಮಾನದ ತೂಕವನ್ನು ಕಂಪನಿ ಕಡಿಮೆ ಮಾಡಿತ್ತು. ಇದರಿಂದಾಗಿ ಸಾಮಾನ್ಯ ವಿಮಾನಗಳಿಗೆ ಹೋಲಿಸಿದರೆ, ಶೇ20% ಹೆಚ್ಚು ಇಂಧನ ದಕ್ಷತೆ ಈ ವಿಮಾನ ಹೊಂದಿದೆ. ಆದರೆ ಈ ವಿಮಾನದ ಬಗ್ಗೆ ಮೊದಲಿನಿಂದಲೂ ಸುರಕ್ಷತೆ ಹಾಗೂ ಗುಣಮಟ್ಟದ ಕುರಿತಂತೆ ಅಕ್ಷೇಪ ಕೇಳಿ ಬಂದಿದೆ.

ಬೋಯಿಂಗ್ ವಿಮಾನದಲ್ಲಿ ಸುರಕ್ಷತೆಗಿಂತ ವೇಗಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ, ಡೆಡ್‌ಲೈನ್ ಪೂರ್ಣಗೊಳಿಸಲು ಸ್ಕ್ರಾಪ್​ ಭಾಗಗಳ ಬಳಕೆ ಮಾಡಿದ ಆರೋಪ ಈ ವಿಮಾನದ ಮೇಲಿದೆ.

Related Video