CDS Bipin Rawat Chopper Crash: ದುರಂತದ ರಹಸ್ಯ ಅಡಗಿರುವ ಬ್ಲಾಕ್ ಬಾಕ್ಸ್ ಕೊನೆಗೂ ಪತ್ತೆ!
ಸಿಡಿಎಸ್ ಬಿಪಿನ್ ರಾವತ್ ಇದ್ದ ಹೆಲಿಕಾಪ್ಟರ್ ಪತನದ ಬಳಿಕ, ಈ ದುರಂತಕ್ಕೇನು ಕಾರಣ ಎಂಬ ವಿಚಾರ ಎಲ್ಲರನ್ನೂ ಕಾಡಲಾರಂಭಿಸಿದೆ. ಹವಾಮಾನ ವೈಪರೀತ್ಯ, ತಾಂತ್ರಿಕ ದೋಷ ಅಥವಾ ಪಿತೂರಿ ನಡೆದಿದೆಯಾ ಎಂಬ ಸಂಶಯಗಳು ಹುಟ್ಟಿಕೊಂಡಿವೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಗಳಿದ್ದರೂ ನಿಖರ ಕಾರಣ ತಿಳಿದುಕೊಳ್ಳಲು ಹೆಲಿಕಾಪ್ಟರ್‌ನಲ್ಲಿದದ್ದ ಬ್ಲಾಕ್ ಬಾಕ್ಸ್ ಅತೀ ಅಗತ್ಯವಾಗಿತ್ತು. ದುರಂತ ಸಂಭವಿಸಿದ ಬಳಿಕ ಈ ಬ್ಲಾಕ್ ಬಾಕ್ಸ್‌ಗಾಗಿ ಭಾರೀ ಹುಡುಕಾಟ ಆರಂಭವಾಗಿದ್ದು, ಕೊನೆಗೂ ಇದು ಪತ್ತೆಯಾಗಿದೆ.
ವೆಲ್ಲಿಂಗ್ಟನ್(ಡಿ.09): ಸಿಡಿಎಸ್ ಬಿಪಿನ್ ರಾವತ್ (Chief of Defence Staff General Bipin Rawat) ಇದ್ದ ಹೆಲಿಕಾಪ್ಟರ್ ಪತನದ ಬಳಿಕ, ಈ ದುರಂತಕ್ಕೇನು ಕಾರಣ ಎಂಬ ವಿಚಾರ ಎಲ್ಲರನ್ನೂ ಕಾಡಲಾರಂಭಿಸಿದೆ. ಹವಾಮಾನ ವೈಪರೀತ್ಯ, ತಾಂತ್ರಿಕ ದೋಷ ಅಥವಾ ಪಿತೂರಿ ನಡೆದಿದೆಯಾ ಎಂಬ ಸಂಶಯಗಳು ಹುಟ್ಟಿಕೊಂಡಿವೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಗಳಿದ್ದರೂ ನಿಖರ ಕಾರಣ ತಿಳಿದುಕೊಳ್ಳಲು ಹೆಲಿಕಾಪ್ಟರ್‌ನಲ್ಲಿದದ್ದ ಬ್ಲಾಕ್ ಬಾಕ್ಸ್ (Black Box) ಅತೀ ಅಗತ್ಯವಾಗಿತ್ತು. ದುರಂತ ಸಂಭವಿಸಿದ ಬಳಿಕ ಈ ಬ್ಲಾಕ್ ಬಾಕ್ಸ್‌ಗಾಗಿ ಭಾರೀ ಹುಡುಕಾಟ ಆರಂಭವಾಗಿದ್ದು, ಕೊನೆಗೂ ಇದು ಪತ್ತೆಯಾಗಿದೆ.
ಹೌದು ನೀಲಗಿರಿ ದಟ್ಟಾರಣ್ಯದಲ್ಲಿ (Nilgiri hills of Tamil Nadu) ಬ್ಲಾಕ್ ಬಾಕ್ಸ್ ಪತ್ತೆಯಾಗಿದೆ. ಸತತ ಕಾರ್ಯಾಚರಣೆ ಬಳಿಕ, 40 ಯೋಧರ ತಂಡ ಕೊನೆಗೂ ಇದನ್ನು ಇಂದು ಪತ್ತೆ ಹಚ್ಚಿದೆ. ಇಷ್ಟು ಸುರಕ್ಷಿತವಾಗಿರುವ ಹೆಲಿಕಾಪ್ಟರ್ ದುರಂತವಾಗಲು ಹೇಗೆ ಸಾಧ್ಯ ಎಂಬ ಸೀಕ್ರೆಟ್ ಇನ್ನು ಈ ಬ್ಲಾಕ್ ಬಾಕ್ಸ್ ಅಷ್ಟೇ ಹೊರಕಾಹಬಲ್ಲದು. ದುರಂತದ ಬಳಿಕ ಇದೊಂದು ಷಡ್ಯಂತ್ರವಾಗಿದ್ದು, ಇದರಲ್ಲಿ ಶತ್ರು ರಾಷ್ಟ್ರಗಳ ಹುನ್ನಾರವಿರಬಹುದೆಂಬ ಅನುಮಾನಗಳೂ ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲೂ ಬ್ಲಾಕ್ ಬಾಕ್ಸ್‌ನಲ್ಲಿರುವ ಮಾಹಿತಿ ಬಹಳ ಮಹತ್ವ ಪಡೆಯುತ್ತದೆ.
ಹೆಲಿಕಾಪ್ಟರ್‌ನ ಹಾರಾಟದ ಮಾಹಿತಿ, ನಿಯಂತ್ರಕರೊಂದಿಗೆ ಪೈಲಟ್‌ನ ಮಾತು, ಕಾಕ್‌ಪಿಟ್‌ನಲ್ಲಿ ನಡೆದ ಸಂಭಾಷಣೆ, ಹವಾಮಾನ ಮಾಹಿತಿ ಎಲ್ಲವೂ ಈ ಬ್ಲ್ಯಾಕ್ ಬಾಕ್ಸ್‌ನಲ್ಲಿ ಇರಲಿದೆ