ಬಿಹಾರದಲ್ಲಿ ರಾಜಕೀಯದ ಥ್ರಿಲ್ಲರ್, ತಿಂಗಳಿಗೊಮ್ಮೆ ಗೇರ್ ಬದಲಿಸುತ್ತಿರುವ ನಿತೀಶ್ ಕುಮಾರ್!
ಬಿಹಾರ ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಕೆಲ ತಿಂಗಳ ಹಿಂದೆ ಬಿಜೆಪಿಗೆ ಕೈಕೊಟ್ಟು ಮಹಾಘಟಬಂದನ್ ಜೊತೆ ಸೇರಿ ಸಿಎಂ ಆಗಿದ್ದ ನಿತೀಶ್ ಕುಮಾರ್, ಈಗ ಮಹಾಘಟಬಂದನ್‌ಗೆ ಕೈಕೊಟ್ಟು ಎನ್‌ಡಿಎಗೆ ಸೇರಲು ಸಜ್ಜಾಗಿದ್ದಾರೆ.
ಬೆಂಗಳೂರು (ಜ.26): ಬಿಹಾರ ರಾಜಕೀಯದಲ್ಲಿ ಕ್ಷಣಕ್ಷಣಕ್ಕೂ ಹೊಸ ಟ್ವಿಸ್ಟ್ ಸಿಗುತ್ತಿದೆ. ಬಿಹಾರದಲ್ಲಿ ಬಿಜೆಪಿ ಹಾಗೂ ಜೆಡಿಯು ನಡುವೆ ಮತ್ತೆ ಮೈತ್ರಿ ಖಾತ್ರಿ ಆಯ್ತು ಎನ್ನುವ ಮಾತುಗಳಿದ್ದು, ಭಾನುವಾರ ನಿತೀಶ್ ಕುಮಾರ್ ಹಾಗೂ ಸುಶೀಲ್ ಕುಮಾರ್ ಮೋದಿ ಪದಗ್ರಹಣ ಮಾಡುವ ಸಾಧ್ಯತೆ ಇದೆ. ಸರಣಿ ಸಭೆ ನಡೆದರೂ ನಾಯಕರು ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.
ಈ ನಡುವೆ ಶುಕ್ರವಾರ ಆರ್‌ಜೆಡಿ ಹಿರಿಯ ಹಾಗೂ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್, ನಿತೀಶ್ ಕುಮಾರ್‌ಗೆ ಸಾಕಷ್ಟು ಬಾರಿ ಕರೆ ಮಾಡಿದರೂ ಒಂದನ್ನೂ ಅವರು ಸ್ವೀಕರಿಸಿಲ್ಲ. ಇದೆಲ್ಲದರ ನಡುವೆ ಬಿಹಾರದಲ್ಲಿ ಮಹಾಘಟಬಂದನ್ ಸರ್ಕಾರ ಐಸಿಯುನಲ್ಲಿರುವುದು ಖಚಿತವಾಗಿದೆ.
ಬಂಡಾಯದ ಬಾವುಟ ಬೀಸಿದ ದಂಡನಾಯಕರು! ಅಂತರ್ಯುದ್ಧಕ್ಕೆ ಛಿದ್ರವಾಗುತ್ತಾ ಘಟಬಂಧನ್..?
ಇನ್ನು ಶುಕ್ರವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲೂ ನಿತೀಶ್ ಕುಮಾರ್ ಹಾಗೂ ಆರ್‌ಜೆಡಿ ನಾಯಕ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ದೂರ ದೂರು ಕುಳಿತುಕೊಂಡಿದ್ದರು. ಅವರ ನಡುವೆ ಯಾವುದೇ ಮಾತುಕತೆ ನಡೆದಿಲ್ಲ. ಇದರಿಂದಾಗಿ ಸರ್ಕಾರ ಇನ್ನು ಕೆಲವೇ ದಿನಗಳಲ್ಲಿ ಪತನವಾಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ.