ಹುಟ್ಟು ಹಬ್ಬದ ದಿನವೇ ಸಿಎಂ ಆದ ಭಜನ್ ಲಾಲ್ ಶರ್ಮಾ..? ಯಾರು ಇವರು, ಹಿನ್ನೆಲೆ ಏನು ?
ರಾಜಸ್ಥಾನದ ಮುಖ್ಯಮಂತ್ರಿಯಾದ ಭಜನ್‌ಲಾಲ್ ಶರ್ಮಾ!
ಇಬ್ಬರು ಡಿಸಿಎಂಗಳ ಜೊತೆ ಭಜನ್‌ಲಾಲ್ ಪ್ರಮಾಣವಚನ
ದಿಯಾ ಕುಮಾರಿ ಹಾಗೂ ಪ್ರೇಮ್ ಚಂದ್ರಗೆ ಡಿಸಿಎಂ ಹುದ್ದೆ
ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ(Bhajan Lal Sharma) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರ ಜೊತೆಗೆ ಉಪಮುಖ್ಯಮಂತ್ರಿಯಾಗಿ ದಿಯಾ ಕುಮಾರಿ ಹಾಗೂ ಪ್ರೇಮ್ ಚಂದ್ರ ಬೈರ್ವಾ ಪ್ರಮಾಣವಚನ(Oath) ಸ್ವೀಕರಿಸಿದ್ದಾರೆ. 57ನೇ ಹುಟ್ಟಿದ ಹಬ್ಬದ ದಿನವೇ ಭಜನ್ ಲಾಲ್ ಶರ್ಮಾ ಸಿಎಂ ಆಗಿದ್ದಾರೆ. ಮೊದಲ ಬಾರಿ ಶಾಸಕನಾಗಿದ್ದರೂ ಅವರಿಗೆ ರಾಜಸ್ಥಾನ ಸಿಎಂ(Rajasthan CM) ಹುದ್ದೆ ಒಲಿದಿದೆ. ಘಟಾನುಘಟಿಗಳನ್ನ ಹಿಂದಿಕ್ಕಿ ಭಜನ್ ಲಾಲ್ ಶರ್ಮಾ ಸಿಎಂ ಆಗಿದ್ದಾರೆ. ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರು ಪ್ರಮಾಣ ವಚನ ಬೋಧನೆ ಮಾಡಿದರು. ರಾಜಸ್ಥಾನದ ಜೈಪುರದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು. ನೂತನ ಸಿಎಂ ಪದಗ್ರಹಣದಲ್ಲಿ ಮೋದಿ, ಅಮಿತ್ ಶಾ ಭಾಗಿಯಾಗಿದ್ದರು.
ಇದನ್ನೂ ವೀಕ್ಷಿಸಿ: Today Horoscope: ಧನುರ್ಮಾಸ ಏಕೆ ಆಚರಿಸಬೇಕು ? ಇದರ ಮಹತ್ವವೇನು ?