BTS 2021: 3 ದಿನಗಳ ಟೆಕ್‌ ಶೃಂಗ ಯಶಸ್ವಿ : ತಂತ್ರಜ್ಞಾನದ ಹೊಸ ಜಗತ್ತಿಗೆ ವೇದಿಕೆಯಾದ ಬೆಂಗಳೂರು !

*ಯಶಸ್ವಿಯಾಗಿ ಪೂರ್ಣಗೊಂಡ 3 ದಿನಗಳ ಟೆಕ್‌ ಶೃಂಗ
*ಸುಮಾರು ನಾಲ್ಕು ಕೋಟಿ ಜನರನ್ನು ತಲುಪಿದ ಟೆಕ್‌ ಸಮ್ಮೀಟ್‌
*48 ದೇಶಗಳ ಪ್ರತಿನಿಧಿಗಳು - 5000 ಕೋಟಿ ರು.ಗಳ ಹೂಡಿಕೆ!
*ವಿಧಾನ ಪರಿಷತ್ ಚುನಾವಣೆ ಮುಕ್ತಾಯದ ಬಳಿಕ ಒಪ್ಪಂದಗಳಿಗೆ ಸಹಿ 

Share this Video
  • FB
  • Linkdin
  • Whatsapp

ಬೆಂಗಳೂರು(ನ.20): ನವೆಂಬರ್‌ 17 ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ(Bengaluru) ನಡೆದ 24ನೇ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ(Bengaluru Tech Summit) ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಘಟಾನುಘಟಿಗಳು ಭಾಗವಹಿಸಿದ್ದ ಟೆಕ್‌ ಶೃಂಗ ಸುಮಾರು ನಾಲ್ಕು ಕೋಟಿ ಜನರನ್ನು ಇದು ತಲುಪಿದ್ದು, 48 ದೇಶಗಳ ಪ್ರತಿನಿಧಿಗಳನ್ನು ಭಾಗವಹಿಸಿದ್ದಾರೆ. ತಂತ್ರಜ್ಞಾನದ ಹೊಸ ಜಗತ್ತಿಗೆ ಇಡೀ ಕರ್ನಾಟಕವನ್ನು(Karnataka) ವೇದಕೆ ಕಲ್ಪಿಸಿ ಟೆಕ್‌ ಶೃಂಗವನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದೆ

Bengaluru Tech Summit| ಟೆಕ್‌ ಶೃಂಗದಲ್ಲಿ 5,000 ಕೋಟಿ ಹೂಡಿಕೆ: ಸಚಿವ ಅಶ್ವತ್ಥ್

ಬಿಟಿಎಸ್‌-2021ರಲ್ಲಿ ವಿವಿಧ ಉದ್ದಿಮೆಗಳಿಂದ ಈಗಾಗಲೇ 5000 ಕೋಟಿ ರು.ಗಳ ಹೂಡಿಕೆ ರಾಜ್ಯಕ್ಕೆ ಬರುವುದು ಪ್ರಾಥಮಿಕ ಅಂದಾಜಿನ ಮೂಲಕ ಖಚಿತವಾಗಿದೆ. ಆದರೆ ವಿಧಾನ ಪರಿಷತ್‌ (MLC Election) ಚುನಾವಣೆಯ ನೀತಿ ಸಂಹಿತೆ (Code of Conduct) ಜಾರಿಯಲ್ಲಿದ್ದು ಒಡಂಬಡಿಕೆಗಳಿಗೆ ಸಹಿ ಹಾಕಲು ಸಾಧ್ಯವಾಗಿಲ್ಲ. ಚುನಾವಣೆ ಮುಕ್ತಾಯದ ಬಳಿಕ ಒಪ್ಪಂದಗಳಿಗೆ ಸಹಿ ಬೀಳಲಿದ್ದು ಇನ್ನೂ ದೊಡ್ಡ ಮೊತ್ತದ ಹೂಡಿಕೆ ನಿರೀಕ್ಷಿಸಲಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. ರಾಜ್ಯದಲ್ಲಿ ಬಂಡವಾಳ ಹೂಡಲು ಪ್ರತಿಷ್ಟಿತ ಕಂಪನಿಗಳು ಮುಂದೆ ಬಂದಿದ್ದು, ಈ ಹೂಡಿಕೆಯಿಂದ ರಾಜ್ಯದಲ್ಲಿ 15,000 ಉದ್ಯೋಗ ಸೃಷ್ಟಿಯಾಗಲಿವೆ ಎಂದು ಐಟಿ-ಬಿಟಿ ಸಚಿವ ಅಶ್ವತ್ಥ್‌ ನಾರಾಯಣ್‌ (Ashwath Narayan) ಹೇಳಿದ್ದಾರೆ.

Related Video