Asianet Suvarna News Asianet Suvarna News

ಟೀಕೆ ಮಾಡೋರ ಮನೆಯಲ್ಲೂ ಹೆಣ್ಮಕ್ಳಿದ್ದಾರೆ: ಎನ್‌ಕೌಂಟರ್ ಸಮರ್ಥಿಸಿದ ಭಾಸ್ಕರ್ ರಾವ್!

ದಿಶಾ ಹತ್ಯಾಚಾರ ಆರೋಪಿಗಳನ್ನು ನರಕಕ್ಕೆ ಕಳುಹಿಸಿದ ಪೊಲೀಸರು| ಪೊಲೀಸ್ ಎನ್‌ಕೌಂಟರ್‌ನಲ್ಲಿ ದಿಶಾ ಹತ್ಯಾಚಾರ ಆರೋಪಿಗಳು ಫಿನಿಷ್| ಪೊಲೀಸ್ ಕಾರ್ಯಾಚರಣೆಗೆ ದೇಶಾದ್ಯಂತ ಸಂಭ್ರಮಾಚರಣೆ| ಹತ್ಯಾಚಾರ ಆರೋಪಿಗಳನ್ನು ಕೊಂದ ಪೊಲೀಸರಿಗೆ ಧನ್ಯವಾದಗಳ ಮಹಾಪೂರ| ಹೈದರಾಬಾದ್ ಎನ್‌ಕೌಂಟರ್ ಸಮರ್ಥಿಸಿದ ಬೆಂಗಳೂರು ಪೊಲೀಸ್ ಆಯುಕ್ತ|

First Published Dec 6, 2019, 5:57 PM IST | Last Updated Dec 7, 2019, 10:33 AM IST

ಬೆಂಗಳೂರು(ಡಿ.06): ದಿಶಾ ಹತ್ಯಾಚಾರ ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಕೊಂದು ಹಾಕಿರುವ ತೆಲಂಗಾಣ ಪೊಲೀಸರನ್ನು ಇಡೀ ದೇಶವೇ ಕೊಂಡಾಡುತ್ತಿದೆ. ರಾಕ್ಷಸರನ್ನು ನರಕಕ್ಕೆ ಕಳುಹಿಸಿದ ಪೊಲೀಸರಿಗೆ ಧನ್ಯವಾದಗಳ ಸುರಿಮಳೆಯೇ ಆಗುತ್ತಿದೆ. ಈ ಮಧ್ಯೆ ಹೈದರಾಬಾದ್ ಪೊಲೀಸರ ನಡೆಯನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಮರ್ಥಿಸಿಕೊಂಡಿದ್ದಾರೆ. ಕಾನೂನಿನ ಅಡಿಯಲ್ಲೇ ಎನ್‌ಕೌಂಟರ್ ನಡೆದಿದ್ದು, ಇದಕ್ಕಾಗಿ ನಾನು ಸಜ್ಜನರ್ ಹಾಗೂ ಅವರ ತಂಡವನ್ನು ಅಭಿನಂದಿಸುತ್ತೇನೆ ಎಂದು ಭಾಸ್ಕರ್ ರಾವ್ ತಿಳಿಸಿದರು. ಇದೇ ವೇಳೆ ಎನ್‌ಕೌಂಟರ್ ಪ್ರಶ್ನಿಸುತ್ತಿರುವವರಿಗೆ ತಕ್ಕ ಉತ್ತರ ನೀಡಿರುವ ಭಾಸ್ಕರ್ ರಾವ್, ಅವರ ಮನೆಯಲ್ಲೂ ಅಕ್ಕ-ತಂಗಿಯರಿದ್ದು, ಅವರಿಗೂ ರಕ್ಷಣೆ ಕೊಡುವ ಜವಾಬ್ದಾರಿಯನ್ನು ಪೊಲೀಸ್ ಇಲಾಖೆ ನಿರ್ವಹಿಸಲಿದೆ ಎಂದು ಮಾರ್ಮಿಕವಾಗಿ ಹೇಳಿದರು.

 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Video Top Stories