ಚಳಿಗಾಲ ಅಧಿವೇಶ, ರೈತ ದಂಗೆ, ಸಿರಿಯಾ ಅರಾಜಕತೆ: ವೀಕ್ಷಿಸಿ ಇಂದಿನ ನ್ಯೂಸ್ ಅವರ್ ಸ್ಪೆಷಲ್
ರಾಜ್ಯ ರಾಜಕಾರಣ, ಚಳಿಗಾಲದ ಅಧಿವೇಶನ, ಮಧ್ಯಪ್ರಾಚ್ಯದಲ್ಲಿ ಅರಾಜಕತೆ ಸೇರಿದಂತೆ ಈ ದಿನದ ಕೆಲ ಮಹತ್ವದ ಬೆಳವಣಿಗೆಗಳ ಸಂಪೂರ್ಣ ಡಿಟೇಲ್ ಈ ವೀಡಿಯೋದಲ್ಲಿದೆ ವೀಕ್ಷಿಸಿ ನ್ಯೂಸ್ ಅವರ್
ಬೆಳಗಾವಿ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ನಿರೀಕ್ಷೆಯಂತೆ ವಕ್ಫ್ ಹಾಗೂ ಮುಡಾ ಹಗರಣಗಳು ಭಾರಿ ಸುದ್ದಿ ಮಾಡುತ್ತಿವೆ. ಆದರೆ ರಾಜ್ಯದಲ್ಲಿ ಪ್ರತಿಪಕ್ಷ ಒಡೆದ ಮನೆಯಾಗಿದ್ದು, ಇದನ್ನೇ ಅಸ್ತ್ರವಾಗಿಸಿಕೊಂಡು ಸರ್ಕಾರ ವಿಪಕ್ಷವನ್ನು ಕಟ್ಟಿ ಹಾಕಲಿದೆಯೇ ಎಂಬ ಪ್ರಶ್ನೆ ಮೂಡಿದೆ. ವಿಪಕ್ಷಗಳ ಒಳ ಜಗಳವೇ ಸಿಎಂಗೆ ಬ್ರಹ್ಮಾಸ್ತ್ರವಾಗುವ ಸೂಚನೆಗಳು ಕಂಡು ಬರುತ್ತಿವೆ. ಮತ್ತೊಂದೆಡೆ ಪ್ರಸ್ತುತ ಸಂಸತ್ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, 10ನೇ ದಿನವಾದ ಇಂದು ಕೂಡ ಸಂಸತ್‌ನಲ್ಲಿ ಕಾಂಗ್ರೆಸ್, ಉದ್ಯಮಿ ಗೌತಮ್ ಅದಾನಿ ವಿರುದ್ಧ ಇರುವ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಗದ್ದಲ ನಡೆಸಿದೆ. ಸಂಸತ್ ಎದುರು ಪ್ರತಿಭಟನೆ ನಡೆಸಿದ ಕಾಂಗ್ರೆಸ್, ಪ್ರಧಾನಿ ಮೋದಿ ಹಾಗೂ ಅದಾನಿಯವರ ಮುಖವಾಡ ಧರಿಸಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದೆ. ಒಬ್ಬರು ಗೌತಮ್ ಅದಾನಿ ಮುಖವಾಡ ತೊಟ್ಟರೆ ಮತ್ತೊಬ್ಬರು ಪ್ರಧಾನಿ ನರೇಂದ್ರ ಮೋದಿ ವೇಷ ತೊಟ್ಟಿದ್ದು, ಇಬ್ಬರನ್ನು ರಾಹುಲ್ ಗಾಂಧಿ ಅಣಕು ಸಂದರ್ಶನ ಮಾಡಿದ್ದಾರೆ.
ಮತ್ತೊಂದೆಡೆ ದೆಹಲಿ ಗಡಿಯಲ್ಲಿ ಮತ್ತೆ ರೈತ ದಂಗೆ ಶುರುವಾಗಿದ್ದು, 101 ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಹೋರಾಟಗಾರರ ಮೇಲೆ ಪೆಪ್ಪರ್ ಸ್ಪ್ರೆ ಮಾಡಲಾಗಿದೆ. ಮತ್ತೊಂದೆಡೆ ಮಧ್ಯಪ್ರಾಚ್ಯದ ರಾಷ್ಟದಲ್ಲಿ ಅರಾಜಕತೆ ನಿರ್ಮಾಣವಾಗಿದೆ. ಬಷರ್ ಅಲ್ ಅಸಾದ್ ರಾಜೀನಾಮೆ ನೀಡಿ ದೇಶ ತೊರೆದ ನಂತರ ಸಿರಿಯಾದಲ್ಲಿ ಬಂಡುಕೋರರ ಕೈಗೆ ಅಧಿಕಾರ ಸಿಕ್ಕಿದ್ದು, ಬಾಂಗ್ಲಾದಲ್ಲಿ ಶೇಕ್ ಹಸೀನಾ ದೇಶ ತೊರೆದ ನಂತರ ಆದಂತೆ ಸಿರಿಯಾದಲ್ಲೂ ಆರಾಜಕತೆಯ ಆರ್ಭಟ ಕಂಡು ಬರುತ್ತಿದೆ ಈ ಎಲ್ಲಾ ಸ್ಟೋರಿಗಳ ಸಂಪೂರ್ಣ ಡಿಟೇಲ್ ಈ ನ್ಯೂಸ್ ಅವರ್ ನಲ್ಲಿದೆ ವೀಕ್ಷಿಸಿ.