Turning Point: ಬಾಬ್ರಿ ಮಸೀದಿ ಧ್ವಂಸವಾದಾಗ ಏನ್ ಮಾಡ್ತಿದ್ರು ಪ್ರಧಾನಿ?
ಒಬ್ಬರ ಮೌನದಿಂದ ದೇಶದಲ್ಲಿ ಎಂಥಾ ಮಹತ್ತರವಾದ, ಐತಿಹಾಸಿಕ ಘಟನೆ ನಡೀತು, ಆ ಮೌನದ ಪ್ರಭಾವ ದೇಶದ ಮೇಲೆ ಹೇಗಿತ್ತು.. ಆ ಒಬ್ಬರ ಮೌನ, ರಾಷ್ಟ್ರ ರಾಜಕಾರಣ ಯಾವತ್ತು ಕಲ್ಪನೆ ಕೂಡ ಮಾಡಿರದ ಟರ್ನಿಂಗ್ ಪಾಯಿಂಟ್ ಹೆಂಗಾಯ್ತು..?
6 ಡಿಸಂಬರ್ 1992.. ಅಯೋಧ್ಯೆಯಲ್ಲಿ ಸೇರಿದ್ದ ಲಕ್ಷೋಪಲಕ್ಷ ಕರಸೇವಕರು ಬಾಬ್ರಿ ಮಸೀದಿ ಮೇಲೆ ದಾಳಿ ಮಾಡಿದ್ದರು. ಬೆಳಗ್ಗೆ ಶುರುವಾದ ದಾಳಿ ಸಂಜೆ ಹೊತ್ತಿಗೆ ಮುಗಿಯೋಷ್ಟ್ರಲ್ಲಿ, ಮಸೀದಿಯ ಮೂರು ಗುಂಬಜುಗಳು ಧ್ವಂಸಗೊಂಡಿತ್ತು. ಅಲ್ಲೇ ಒಂದು ಪುಟ್ಟ ಮಂದಿರವೂ ತಲೆ ಎತ್ತಿತ್ತು.. ಇದೊಂದು ಘಟನೆ, ರಾಷ್ಟ್ರ ರಾಜಕಾರಣಕ್ಕೆ ಅತಿ ದೊಡ್ಡ ತಿರುವು ಕೊಟ್ಟಿತ್ತು..ಈ ವೇಳೆ ಪ್ರಧಾನಿ ಏನು ಮಾಡುತ್ತಿದ್ದರು? ದೇಶದ ಈ ಮೇಜರ್ ಟರ್ನಿಂಗ್ ಪಾಯಿಂಟ್ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.