ಇಂದು ಗುದ್ದಲಿ ಪೂಜೆ; ಹೀಗಿರಲಿದೆ ಭವ್ಯ ರಾಮಮಂದಿರ

ಮರ್ಯಾದಾ ಪುರುಷೋತ್ತಮ’ ಶ್ರೀರಾಮಚಂದ್ರನ ಭವ್ಯವಾದ ಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಾಣ ಮಾಡಬೇಕು ಎಂಬ ದಶಕಗಳ ಕನಸು ಈಡೇರುವ ಕಾಲ ಆರಂಭವಾಗಿದೆ. ಬುಧವಾರ ರಾಮಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಯಲಿದೆ.

First Published Jun 10, 2020, 11:08 AM IST | Last Updated Jun 10, 2020, 1:05 PM IST

ಬೆಂಗಳೂರು (ಜೂ. 10): ಮರ್ಯಾದಾ ಪುರುಷೋತ್ತಮ’ ಶ್ರೀರಾಮಚಂದ್ರನ ಭವ್ಯವಾದ ಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಾಣ ಮಾಡಬೇಕು ಎಂಬ ದಶಕಗಳ ಕನಸು ಈಡೇರುವ ಕಾಲ ಆರಂಭವಾಗಿದೆ. ಬುಧವಾರ ರಾಮಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಯಲಿದೆ.

67.7 ಎಕರೆ ಜಾಗದ ಮಧ್ಯೆ ರಾಮಮಂದಿರ ನಿರ್ಮಾಣವಾಗಲಿದೆ. ಒಂದು ಎಕರೆಯಷ್ಟುವಿಶಾಲ ಪ್ರದೇಶದಲ್ಲಿ ದೇಗುಲ ನಿರ್ಮಿಸುವ ಯೋಜನೆ ಇದೆ. 268 ಅಡಿ ಉದ್ದ, 140 ಅಡಿ ಅಗಲ, 128 ಅಡಿ ಎತ್ತರದ ದೇಗುಲ ಎರಡು ಅಂತಸ್ತಿನ ದೇಗುಲ ಇದಾಗಿರಲಿದೆ. ಮೊದಲ ಮಹಡಿಯಲ್ಲಿ 106 ಕಂಬ ಹಾಗೂ ಎರಡನೇ ಮಹಡಿಯಲ್ಲಿ 106 ಕಂಬಗಳು ಇರಲಿವೆ.

ಶತಮಾನದ ವಿವಾದ ಶಾಂತಿಯುತವಾಗಿ ಅಂತ್ಯ; ಕೊನೆಗೂ ರಾಮಮಂದಿರ ಕೆಲಸ ಶುರು

ಈ ಪೈಕಿ ಮೊದಲ ಮಹಡಿಯ ಕಂಬಗಳು ಪೂರ್ಣ ಸಿದ್ಧವಾಗಿದ್ದರೆ, ಎರಡನೆ ಮಹಡಿಯ ಅರ್ಧದಷ್ಟುಕಂಬಗಳು ತಯಾರಾಗಿವೆ. ಪ್ರತಿ ಕಂಬದ ಮೇಲೂ ದೇವರ 106 ಚಿತ್ರಗಳು ಇರಲಿವೆ. ಒಂದು ಕಂಬ ತಯಾರಿಸಲು ಒಂದು ವರ್ಷ ಹಿಡಿದಿದೆ. ಅಯೋಧ್ಯೆ ರಾಮಮಂದಿರಕ್ಕೆ ತೆರಳಲು 2 ಎಕರೆ ಜಾಗದಲ್ಲಿ ಕಾರಿಡಾರ್‌ ನಿರ್ಮಿಸಲಾಗುತ್ತದೆ. ಉಳಿದ ಜಾಗದಲ್ಲಿ ಭಜನಾ ಕೇಂದ್ರ, ರಂಗಮಂಟಪ, ಭಕ್ತಾದಿಗಳು ತಂಗುವುದಕ್ಕೆ ಧರ್ಮಶಾಲೆ, ಭೋಜನ ಕೋಣೆ ಮತ್ತಿತರ ಸೌಕರ್ಯಗಳು ಇರಲಿವೆ.