ಲೋಕಸಭೆ ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್‌ಗೆ ಬಿಗ್ ಶಾಕ್..! 'ಮಹಾ'ದಲ್ಲಿ 'ಕೈ' ತೊರೆದ ಮತ್ತೊಬ್ಬ ಹಿರಿಯ ನಾಯಕ !

ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಅಶೋಕ್ ಚೌಹಾಣ್ ಗುಡ್ ಬೈ
ಪಕ್ಷವನ್ನೇ ಇಬ್ಭಾಗ ಮಾಡ್ತಾರಾ ಕಾಂಗ್ರೆಸ್ ನಾಯಕ ಚೌಹಾಣ್
ತಾನಷ್ಟೇ ಅಲ್ಲದೇ ಮತ್ತಷ್ಟು ಶಾಸಕರು ಬಿಜೆಪಿ ಸೇರುವ ಮಾತು

First Published Feb 13, 2024, 12:49 PM IST | Last Updated Feb 13, 2024, 12:49 PM IST

ಲೋಕಸಭೆ ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್‌ಗೆ(Congress) ಬಿಗ್ ಶಾಕ್ ಆಗಿದೆ. ಮಹಾರಾಷ್ಟ್ರದಲ್ಲಿ(Maharashtra) ಕಾಂಗ್ರೆಸ್‌ನ ಮತ್ತೊಬ್ಬ ಹಿರಿಯ ನಾಯಕ ಪಕ್ಷ ತೊರೆದಿದ್ದಾರೆ. ಮಾಜಿ ಸಿಎಂ ಅಶೋಕ್ ಚೌಹಾಣ್(Ashok Chauhan) ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಕಾಂಗ್ರೆಸ್‌ಗೆ ಮೂರನೇ ಆಘಾತ ಇದಾಗಿದೆ. ಇತ್ತೀಚೆಗೆ ಮಿಲಿಂದ್ ದಿಯೋರಾ, ಬಾಬಾ ಸಿದ್ದಿಕಿ ರಾಜೀನಾಮೆ ನೀಡಿದ್ದರು. ಇದೀಗ ಕಾಂಗ್ರೆಸ್ ನಾಯಕ ಅಶೋಕ್ ಚೌಹಾಣ್ ಗುಡ್ ಬೈ ಹೇಳಿದ್ದಾರೆ. ಶಾಸಕ ಸ್ಥಾನ, ಕಾಂಗ್ರೆಸ್ ಸದಸ್ಯತ್ವಕ್ಕೆ ಚೌಹಾಣ್ ರಾಜೀನಾಮೆ ನೀಡಿದ್ದಾರೆ. ಅಶೋಕ್ ಚೌಹಾಣ್ ಜೊತೆ ಮತ್ತೊಬ್ಬ ನಾಯಕ ಅಮರ್‌ನಾಥ್ ರಾಜೂರ್ಕರ್ ರಾಜೀನಾಮೆ ನೀಡಿದ್ದಾರೆ. ಶೀಘ್ರದಲ್ಲೇ ಅಶೋಕ್ ಚೌಹಾಣ್ ಜೊತೆ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ. ಡಿಸೆಂಬರ್‌ನಿಂದಲೇ ಕೇಳಿ ಬರ್ತಿದ್ದ ಚೌಹಾಣ್ ಸೇರ್ಪಡೆ ಮಾತು. ಇದೀಗ ರಾಜೀನಾಮೆ ನೀಡಿ ಕಾಂಗ್ರೆಸ್‌ನಿಂದ ಚೌಹಾಣ್ ಹೊರಗೆ ಹೋಗಿದ್ದಾರೆ.

ಇದನ್ನೂ ವೀಕ್ಷಿಸಿ:  ಕತಾರ್‌ನಲ್ಲಿ ಗಲ್ಲಿಗೆ ಗುರಿಯಾಗಿದ್ದ ಭಾರತೀಯರಿಗೆ ರಿಲೀಫ್: ಆರೋಪ ಮುಕ್ತಗೊಳಿಸಿ ಬಿಡುಗಡೆ !

Video Top Stories