5 ಎಕರೆ ಭೂಮಿಯ ಭಿಕ್ಷೆ ಬೇಡ: ಇದು ಒವೈಸಿ ರಿಯಾಕ್ಷನ್!

 ಅಯೋಧ್ಯೆ ಭೂವಿವಾದ ಕುರಿತಾದ ಸುಪ್ರೀಂಕೋರ್ಟ್ ತೀರ್ಪನ್ನು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ತಿರಸ್ಕರಿಸಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಅಂತಿಮವಾದರೂ  ದೋಷರಹಿತವಲ್ಲ ಎಂದು ಅಸದುದ್ದೀನ್ ಒವೈಸಿ ಮಾರ್ಮಿಕವಾಗಿ ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಹೈದರಾಬಾದ್(ನ.09):ಅಯೋಧ್ಯೆ ಭೂವಿವಾದ ಕುರಿತಾದ ಸುಪ್ರೀಂಕೋರ್ಟ್ ತೀರ್ಪನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ತಿರಸ್ಕರಿಸಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಅಂತಿಮವಾದರೂ ದೋಷರಹಿತವಲ್ಲ ಎಂದು ಅಸಾದುದ್ದೀನ್ ಒವೈಸಿ ಮಾರ್ಮಿಕವಾಗಿ ಹೇಳಿದ್ದಾರೆ.

ಸುಪ್ರೀಂಕೋರ್ಟ್ ನೀಡಿರುವ 5 ಎಕರೆ ಭೂಮಿಯ ಭಿಕ್ಷೆ ಮುಸ್ಲಿಮರಿಗೆ ಬೇಕಿಲ್ಲ ಎಂದಿರುವ ಒವೈಸಿ ಹೇಳಿದ್ದು, ನಾನು ರಸ್ತೆಗಿಳಿದು ಭಿಕ್ಷೆ ಬೇಡಿದರೆ ಈ ದೇಶದ ಮುಸ್ಲಿಮರು 5 ಎಕರೆ ಭೂಮಿ ಖರೀದಿಸುವಷ್ಟು ಹಣ ನೀಡುತ್ತಾರೆ ಎಂದು ಗುಡುಗಿದರು.

ಇಂದಿನ ತೀರ್ಪಿಗೆ ವಿರುದ್ಧವಾಗಿ ಮರುಪರಿಶೀಲನೆ ಅರ್ಜಿ ಸಲ್ಲಿಸುವ ಕುರಿತು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿರ್ಧರಿಸಲಿದೆ ಎಂದು ಒವೈಸಿ ಸ್ಪಷ್ಟಪಡಿಸಿದರು.

ನವೆಂಬರ್ 9ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Related Video