ಬಿಜೆಪಿ ಸೇರ್ತಿಲ್ಲ, ಆದರೆ ದೇಶ ದುರ್ಬಲ ಮಾಡುವ ಶಕ್ತಿಗಳ ವಿರುದ್ಧವಿದ್ದೇನೆ: ಅನಿಲ್ ಆಂಟನಿ!
ಈ ಬಾರಿ ಏಷ್ಯಾನೆಟ್ ನ್ಯೂಸ್ ಡೈಲಾಗ್‌ನಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರೀಯ ಸಾಮಾಜಿಕ ಮಾಧ್ಯಮ ಸಂಯೋಜಕ ಅನಿಲ್ ಕೆ ಆಂಟನಿ ನಮ್ಮೊಂದಿಗೆ ಮಾತನಾಡಿದ್ದಾರೆ. ಇತ್ತೀಚೆಗಷ್ಟೇ ಅವರು ಮಾಡಿದ ಟ್ವೀಟ್‌ಗೆ ಸ್ವತಃ ಕಾಂಗ್ರೆಸ್ ಪಕ್ಷದಲ್ಲಿಯೇ ವಿರೋಧ ವ್ಯಕ್ತವಾಗಿತ್ತು.
ಬೆಂಗಳೂರು (ಫೆ.5): ಮಾಜಿ ಕೇಂದ್ರ ರಕ್ಷಣಾ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಎಕೆ ಆಂಟನಿ ಅವರ ಪುತ್ರ ಅನಿಲ್ ಕೆ ಆಂಟನಿ ಅವರು ಮಾಡಿದ ಒಂದೇ ಒಂದು ಟ್ವೀಟ್‌ನಲ್ಲಿ ಕಾಂಗ್ರೆಸ್‌ನಲ್ಲಿ ಎಷ್ಟು ದೊಡ್ಡ ಮಟ್ಟದ ವಿರೋದ ವ್ಯಕ್ತವಾಗಿತ್ತು ಅನ್ನೋದನ್ನ ಎಲ್ಲರೂ ನೋಡಿದ್ದೇವೆ. ಬಳಿಕ ಕಾಂಗ್ರೆಸ್ ಪಕ್ಷದ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಅನಿಲ್ ಕೆ ಆಂಟನಿ, ಈ ಬಾರಿ ಏಷ್ಯಾನೆಟ್ ನ್ಯೂಸ್ ಡೈಲಾಗ್‌ನಲ್ಲಿ ಮಾತನಾಡಿದರು.
ಇಷ್ಟೆಲ್ಲ ಆದರೂ, ಬಿಜೆಪಿ ಸೇರುವ ಮಾತಿಲ್ಲ. ಆದರೆ, ದೇಶವನ್ನು ದುರ್ಬಲ ಮಾಡಬೇಕು ಎನ್ನುವ ಹಂಬಲದಲ್ಲಿರುವ ಎಲ್ಲರ ವಿರುದ್ಧವಿದ್ದೇನೆ ಎಂದು ಹೇಳುವ ಮೂಲಕ ಟ್ವೀಟ್‌ನಲ್ಲಿ ತಾವು ಹೇಳಬೇಕಂತಿದ್ದ ವಿಷಯಗಳ ಬಗ್ಗೆ ಮತ್ತೊಮ್ಮೆ ಸ್ಪಷ್ಟವಾಗಿ ತಿಳಿಸಿದರು.
Modi Documentary Controversy: ಬಿಬಿಸಿ ವಿರುದ್ಧ ಆಕ್ರೋಶ ಹೊರಹಾಕಿದ ಕಾಂಗ್ರೆಸ್ ನಾಯಕ ಎಕೆ ಆಂಟನಿ ಪುತ್ರ!
ಮೋದಿ ಕುರಿತಾಗಿ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ಮಾತನಾಡಿದ್ದ ಅವರು, ಭಾರತದ ಸಾರ್ವಭೌಮತೆಯ ಬಗ್ಗೆ ಬಿಬಿಸಿ ಪ್ರಶ್ನೆ ಮಾಡುತ್ತಿದೆ ಎಂದು ಹೇಳಿದ್ದರು. ಬಿಬಿಸಿ ಸಾಕ್ಷ್ಯಚಿತ್ರದ ಕುರಿತು ತಮ್ಮ ಅಭಿಪ್ರಾಯವೇನು, ಕಾಂಗ್ರೆಸ್ ತೊರೆದಿದ್ದೇಕೆ, ದೇಶದ ಪ್ರಸ್ತುತ ರಾಜಕೀಯ ಸನ್ನಿವೇಶಗಳ ಬಗ್ಗೆ ಅವರು ಮಾತನಾಡಿದ್ದಾರೆ.