Asianet Suvarna News Asianet Suvarna News

Modi Documentary Controversy: ಬಿಬಿಸಿ ವಿರುದ್ಧ ಆಕ್ರೋಶ ಹೊರಹಾಕಿದ ಕಾಂಗ್ರೆಸ್‌ ನಾಯಕ ಎಕೆ ಆಂಟನಿ ಪುತ್ರ!

"ಭಾರತದ ಜನರು ಭಾರತೀಯ ಸಂಸ್ಥೆಗಳಿಗಿಂತ ಬಿಬಿಸಿಯ ದೃಷ್ಟಿಕೋನಗಳಿಗೆ ಆದ್ಯತೆ ನೀಡುವುದು ಅತ್ಯಂತ ಅಪಾಯಕಾರಿ ಅಭ್ಯಾಸವಾಗಿದೆ' ಎಂದು ಮಾಜಿ ರಕ್ಷಣಾ ಸಚಿವ ಎಕೆ ಆಂಟನಿ ಅವರ ಪುತ್ರ ಅನಿಲ್‌ ಕೆ ಆಂಟನಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
 

Modi Documentary Controversy Congress Leader A K Antony son Anil Antony against bbc san
Author
First Published Jan 24, 2023, 3:46 PM IST

ಬೆಂಗಳೂರು (ಜ.24): ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಬಿಬಿಸಿ (ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್) ನಿರ್ಮಿಸಿರುವ 'ಇಂಡಿಯಾ: ದಿ ಮೋದಿ ಕ್ವೆಶ್ಚನ್' ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ವಿವಾದದ ನಡುವೆಯೇ, ಹಿರಿಯ ಕಾಂಗ್ರೆಸ್ ನಾಯಕ ಎಕೆ ಆಂಟನಿ ಅವರ ಪುತ್ರ ಮತ್ತು ಕೆಪಿಸಿಸಿ ಡಿಜಿಟಲ್ ಮೀಡಿಯಾ ಸೆಲ್ ಸಂಚಾಲಕ ಅನಿಲ್ ಆಂಟನಿ ಭಿನ್ನ ನಿಲುವು ತಳೆದಿದ್ದಾರೆ.  ಭಾರತೀಯ ಸಂಸ್ಥೆಗಳ ಮೇಲೆ ಬಿಬಿಸಿಯ ದೃಷ್ಟಿಕೋನಕ್ಕೆ ಆದ್ಯತೆ ನೀಡುವುದು ಅತ್ಯಂತ ಅಪಾಯಕಾರಿ ಅಭ್ಯಾಸ ಎಂದು ಅನಿಲ್‌ ಆಂಟನಿ ಟ್ವೀಟ್ ಮಾಡಿದ್ದಾರೆ. ಬಿಜೆಪಿಯೊಂದಿಗೆ ನನಗೆ ಭಾರೀ ಭಿನ್ನಾಭಿಪ್ರಾಯವಿದೆ. ಆದರೂ ಭಾರತದಲ್ಲಿರುವವರು ಭಾರತೀಯ ಸಂಸ್ಥೆಗಳಿಗಿಂತ ಬಿಬಿಸಿಯ ದೃಷ್ಟಿಕೋನಗಳಿಗೆ ಆದ್ಯತೆ ನೀಡುವುದು ತುಂಬಾ ಅಪಾಯಕಾರಿ ಅಭ್ಯಾಸ ಎಂದು ನಾನು ನಂಬುತ್ತೇನೆ. ಮೇಲಾಗಿ, ಇದು ನಮ್ಮ ಸಾರ್ವಭೌಮತ್ವದ ಮೇಲಿನ ಆಕ್ರಮಣವಾಗಿದೆ.  ಏಕೆಂದರೆ ಬಿಬಿಸಿ ಪೂರ್ವಾಗ್ರಹದ ಸುದೀರ್ಘ ಇತಿಹಾಸವನ್ನು ಹೊಂದಿರುವ ಬ್ರಿಟಿಷ್ ಬೆಂಬಲಿತ ಚಾನಲ್, ಅಷ್ಟೇ ಅಲ್ಲ, ಇರಾಕ್ ಯುದ್ಧದ ಹಿಂದಿನ ಮೆದುಳು ಜಾಕ್ ಸ್ಟ್ರಾ ಎನ್ನುವುದು ನಮಗೆಲ್ಲರಿಗೂ ತಿಳಿದ ವಿಚಾರ ಎಂದಿದ್ದಾರೆ.


ಈ ನಡುವೆ ಮೋದಿ ಕುರಿತಾದ ಸಾಕ್ಷ್ಯಚಿತ್ರವನ್ನು ಕೇರಳದಲ್ಲಿ ಪ್ರದರ್ಶನ ಮಾಡಲಿದ್ದೇವೆ ಎಂದು ಡಿವೈಎಫ್‌ಐ ಮತ್ತು ಯುವ ಕಾಂಗ್ರೆಸ್ ಸ್ಪಷ್ಟಪಡಿಸಿವೆ. ಮೋದಿ ಸರ್ಕಾರ ನಿಷೇಧಿಸಿರುವ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವುದಾಗಿ ಡಿವೈಎಫ್‌ಐ ತನ್ನ ಅಧಿಕೃತ ಫೇಸ್‌ಬುಕ್ ಪುಟದ ಮೂಲಕ ಪ್ರಕಟಿಸಿದೆ. ಬಿಬಿಸಿ ಸಾಕ್ಷ್ಯಚಿತ್ರವನ್ನು ಕೇರಳದಲ್ಲಿ ಪ್ರದರ್ಶಿಸಲಾಗುವುದು ಎಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಶಾಫಿ ಪರಂಬಿ ಹೇಳಿದ್ದಾರೆ. ಚಾರಿತ್ರಿಕ ಸಂಗತಿಗಳು ಯಾವಾಗಲೂ ಸಂಘಪರಿವಾರ ಮತ್ತು ಮೋದಿಯ ಶತ್ರುಗಳ ಪಾಲಿಗೆ ಇರುತ್ತವೆ. ಶಾಫಿ ಪರಂಬಿಲ್ ಮಾತನಾಡಿ, ದ್ರೋಹ, ಕ್ಷಮೆಯಾಚನೆ, ನರಮೇಧದ ನೆನಪುಗಳನ್ನು ಅಧಿಕಾರದಿಂದ ಮರೆಮಾಡಲು ಸಾಧ್ಯವಿಲ್ಲ.

'ಚರ್ಚಿಲ್‌ ಬಗ್ಗೆಯೂ ಸಿರೀಸ್‌ ಮಾಡಿ..'ಪಿಎಂ ಮೋದಿ ಕುರಿತಾಗಿ ಬಿಬಿಸಿ ಸರಣಿಗೆ ಟ್ವಿಟರ್‌ನಲ್ಲಿ ಟೀಕೆ!

ಇಂದು ಮತ್ತು ನಾಳೆ ಕೇರಳದ 200 ಕೇಂದ್ರಗಳಲ್ಲಿ ಪ್ರದರ್ಶನ ನಡೆಯಲಿದೆ ಎಂದು ಡಿವೈಎಫ್ಐ ಪ್ರಕಟಿಸಿದೆ. ಇದೇ ವೇಳೆ ಕೇರಳದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶಿಸುವ ಕ್ರಮವನ್ನು ನಿಲ್ಲಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಕೇರಳದಲ್ಲಿ 2002ರ ಗುಜರಾತ್ ಗಲಭೆ ಕುರಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವ ಕ್ರಮಕ್ಕೆ ಅವಕಾಶ ನೀಡಬಾರದು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಕೇಂದ್ರ ಸಚಿವ ವಿ.ಮುರಳೀಧರನ್ ಆಗ್ರಹಿಸಿದ್ದಾರೆ.

ವಿವಾದಿತ ಮೋದಿ ಸಾಕ್ಷ್ಯಚಿತ್ರಕ್ಕೆ ಬಿಬಿಸಿ ಸಂಸ್ಥೆ ಸಮರ್ಥನೆ: ಭಾರತ, ರಿಷಿ ಸುನಕ್‌ ಟೀಕೆಗೆ ಸ್ಪಷ್ಟನೆ

ಈ ನಡುವೆ ದೆಹಲಿಯ ಜೆಎನ್‌ಯುನಲ್ಲಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುವುದು ಎಂದು ಎಡಪಂಥೀಯ ಸಂಘಟನೆಗಳು ಘೋಷಿಸಿವೆ. ಇದೇ ವೇಳೆ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಈ ಸಾಕ್ಷ್ಯಚಿತ್ರದ ಕುರಿತಾದ ಪ್ರಚಾರ ನಡೆಸಿದ್ದಕ್ಕಾಗಿ ಎಬಿವಿಪಿ ದೂರು ದಾಖಲಿಸಿದೆ. ಈ ನಡುವೆ ಸೋಶಿಯಲ್‌ ಮೀಡಿಯಾದಿಂದ ತೆಗೆದುಹಾಕಲಾಗಿರುವ ಸಾಕ್ಷ್ಯಚಿತ್ರವನ್ನು, ಇಂಟರ್ನೆಟ್‌ ಆರ್ಕೈವ್‌ನಿಂದಲೂ ತೆಗೆದು ಹಾಕಲಾಗಿದ.ೆ ಹಲವಾರು ಕಾರಣಗಳಿಂದ ಈ ಸಾಕ್ಷ್ಯಚಿತ್ರವನ್ನು ತೆಗೆದುಹಾಕಲಾಗಿದೆ ಎನ್ನುವ ವಿವರಣೆ ಕೂಡ ಬಿತ್ತರವಾಗಿದೆ. ಈ ನಡುವೆ ಸಾಕ್ಷ್ಯಚಿತ್ರದ ಎರಡನೇ ಭಾಗವನ್ನು ಇಂದು ಬಿಬಿಸಿ ಬಿಡುಗಡೆ ಮಾಡಲಿದೆ.

Follow Us:
Download App:
  • android
  • ios