Asianet Suvarna News Asianet Suvarna News

ಗೆಸ್ಟ್‌ಗಳಿಗೆ ಮುಕೇಶ್ ಅಂಬಾನಿ ಹಾಕಿರೋ ಕಂಡಿಶನ್ ಏನು..? ಅನಂತ್ -ರಾಧಿಕಾ ಪ್ರಿವೆಡ್ಡಿಂಗ್ ಪಾರ್ಟ್-1 ಹೇಗಿತ್ತು..?

ರಾಯಲ್ ಕ್ರೂಸ್ನಲ್ಲಿ ಅಂಬಾನಿ ಫ್ಯಾಮಿಲಿ ಗ್ರ್ಯಾಂಡ್ ಸೆಲೆಬ್ರೆಶನ್..!
ಇದು ಸ್ವರ್ಗ ಲೋಕದ ಮದುವೆಯಲ್ಲ..ಭೂಲೋಕದ ಮದುವೆ..!
ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ಬಾಲಿವುಡ್ ತಾರೆಯರು..!

ದೇಶದ ಅತ್ಯಂತ ಶ್ರೀಮಂತರ ಪೈಕಿ ಅಗ್ರಸ್ಥಾನದಲ್ಲಿರುವ ರಿಲಯನ್ಸ್‌ ಸಮೂಹದ ಮುಖ್ಯಸ್ಥ ಮುಕೇಶ್‌ ಅಂಬಾನಿ(Mukesh Ambani) ಅವರ ಕೊನೆಯ ಪುತ್ರ ಅನಂತ್‌ ಅಂಬಾನಿ(Anant Ambani) ಮತ್ತು ರಾಧಿಕಾ ಮರ್ಚೆಂಟ್‌(Radhika Merchant) ವಿವಾಹಕ್ಕೂ ಮುನ್ನ(Pre Wedding Celebration) ಮತ್ತೊಂದು ಸಂಭ್ರಮಾಚರಣೆಗೆ ಸಿದ್ಧವಾಗಿದ್ದಾರೆ. ಮಗನಿಗಾಗಿ ಮುಕೇಶ್‌ ಅಂಬಾನಿ ನೀರಿನ ಮೇಲೆ ಸ್ವರ್ಗವನ್ನೇ ಸೃಷ್ಟಿ ಮಾಡಿದ್ದಾರೆ. ರಾಯಲ್‌ ಕ್ರೂಸ್‌ನಲ್ಲಿ(Royal Cruise) ಅಂಬಾನಿ ಕುಟುಂಬ ಗ್ರ್ಯಾಂಡ್‌ ಸೆಲೆಬ್ರೆಶನ್‌ ಮಾಡಲಿದೆ. ಖಾಸಗಿ ಹಡಗಿನಲ್ಲಿ (ಕ್ರ್ಯೂಸ್‌) ನಡೆಯುವ ವೈಭವೋಪೇತ ಪಾರ್ಟಿ ಎನ್ನುವುದು ವಿಶೇಷ. ಈ ಪಾರ್ಟಿಯಲ್ಲಿ ಜಗತ್ತಿನ 800 ಅಗ್ರಗಣ್ಯ ಅತಿಥಿಗಳು ಭಾಗಿಯಾಗಲಿದ್ದು, ಬಾಲಿವುಡ್‌ ತಾರೆಯರ ಜತೆಗೆ ಹಾಲಿವುಡ್‌ ತಾರೆಯರ ಮೆರುಗು ಕೂಡ ಹಡಗಿನಲ್ಲಿ ಇರಲಿದೆ ಎಂದು ತಿಳಿದುಬಂದಿದೆ. 

ಇದನ್ನೂ ವೀಕ್ಷಿಸಿ:  Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ?