ಕೊರೋನಾತಂಕದ ಮಧ್ಯೆ ಚುನಾವಣೆಗೆ ತಯಾರಿ, ನಿಯಮಗಳೆಲ್ಲಾ ಬದಲು!

 ದೇಶಾದ್ಯಂತ ಕೊರೋನಾ ಸೋಂಕು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ, ಮುಂಬರುವ (ಕೋವಿಡ್‌ ಸಾಂಕ್ರಾಮಿಕ ಅವಧಿಯಲ್ಲಿ) ಚುನಾವಣೆಗಳನ್ನು ಆಯೋಜಿಸುವ ಸಂಬಂಧ ಕೇಂದ್ರ ಚುನಾವಣಾ ಆಯೋಗ ಹೊಸ ನಿಯಮಗಳನ್ನು ರೂಪಿಸಿದೆ.ಶುಕ್ರವಾರ ಬಿಡುಗಡೆ ಮಾಡಲಾದ ಈ ನಿಯಮಗಳ ಅನ್ವಯ, 80 ವರ್ಷ ದಾಟಿದವರಿಗೆ ಹಾಗೂ ಕೊರೋನಾ ರೋಗಿಗಳಿಗೆ ಅಂಚೆಯಲ್ಲಿ ಮತದಾನ ಮಾಡಲು ವ್ಯವಸ್ಥೆ ಕಲ್ಪಿಸಿದೆ. ಜೊತೆಗೆ, ಮತಗಟ್ಟೆಗಳಲ್ಲಿ ಮತದಾನ ಮಾಡುವ ಎಲ್ಲ ಮತದಾರರಿಗೂ ರಿಜಿಸ್ಟರ್‌ಗೆ ಸಹಿ ಹಾಕಲು ಮತ್ತು ಎಲೆಕ್ಟ್ರಾನಿಕ್‌ ಮತಯಂತ್ರದ ಗುಂಡಿ ಒತ್ತಲು ಕಡ್ಡಾಯವಾಗಿ ಹ್ಯಾಂಡ್‌ಗ್ಲೌಸ್‌ ನೀಡಲು ನಿರ್ಧರಿಸಿದೆ.ಜೊತೆಗೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಆನ್‌ಲೈನ್‌ನಲ್ಲೇ ನಾಮಪತ್ರ ಸಲ್ಲಿಕೆ ಮಾಡಬಹುದು. ಆದರೆ, ಅದಕ್ಕೂ ಮುನ್ನ ದಾಖಲೆಗಳಿಗೆ ರಿಟರ್ನಿಂಗ್‌ ಅಧಿಕಾರಿಯ ಮುಂದೆ ಸಹಿ ಹಾಕಿ, ಪ್ರಿಂಟೌಟ್‌ ತೆಗೆದುಕೊಳ್ಳಬೇಕು.

Share this Video
  • FB
  • Linkdin
  • Whatsapp

ನವದೆಹಲಿ(ಆ.22) ದೇಶಾದ್ಯಂತ ಕೊರೋನಾ ಸೋಂಕು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ, ಮುಂಬರುವ (ಕೋವಿಡ್‌ ಸಾಂಕ್ರಾಮಿಕ ಅವಧಿಯಲ್ಲಿ) ಚುನಾವಣೆಗಳನ್ನು ಆಯೋಜಿಸುವ ಸಂಬಂಧ ಕೇಂದ್ರ ಚುನಾವಣಾ ಆಯೋಗ ಹೊಸ ನಿಯಮಗಳನ್ನು ರೂಪಿಸಿದೆ.

ಶುಕ್ರವಾರ ಬಿಡುಗಡೆ ಮಾಡಲಾದ ಈ ನಿಯಮಗಳ ಅನ್ವಯ, 80 ವರ್ಷ ದಾಟಿದವರಿಗೆ ಹಾಗೂ ಕೊರೋನಾ ರೋಗಿಗಳಿಗೆ ಅಂಚೆಯಲ್ಲಿ ಮತದಾನ ಮಾಡಲು ವ್ಯವಸ್ಥೆ ಕಲ್ಪಿಸಿದೆ. ಜೊತೆಗೆ, ಮತಗಟ್ಟೆಗಳಲ್ಲಿ ಮತದಾನ ಮಾಡುವ ಎಲ್ಲ ಮತದಾರರಿಗೂ ರಿಜಿಸ್ಟರ್‌ಗೆ ಸಹಿ ಹಾಕಲು ಮತ್ತು ಎಲೆಕ್ಟ್ರಾನಿಕ್‌ ಮತಯಂತ್ರದ ಗುಂಡಿ ಒತ್ತಲು ಕಡ್ಡಾಯವಾಗಿ ಹ್ಯಾಂಡ್‌ಗ್ಲೌಸ್‌ ನೀಡಲು ನಿರ್ಧರಿಸಿದೆ.

ಜೊತೆಗೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಆನ್‌ಲೈನ್‌ನಲ್ಲೇ ನಾಮಪತ್ರ ಸಲ್ಲಿಕೆ ಮಾಡಬಹುದು. ಆದರೆ, ಅದಕ್ಕೂ ಮುನ್ನ ದಾಖಲೆಗಳಿಗೆ ರಿಟರ್ನಿಂಗ್‌ ಅಧಿಕಾರಿಯ ಮುಂದೆ ಸಹಿ ಹಾಕಿ, ಪ್ರಿಂಟೌಟ್‌ ತೆಗೆದುಕೊಳ್ಳಬೇಕು.

Related Video