ಅಮರನಾಥ್‌ ದುರಂತಕ್ಕೂ 2 ತಾಸು ಮುನ್ನ ಕೆಳಗೆ ಬಂದೆವು, ಅನುಭವ ಬಿಚ್ಚಿಟ್ಟ ಮೈಸೂರು ವಕೀಲರು

ಮೈಸೂರಿನ ಯಾತ್ರಾರ್ಥಿ ಸುಧೀರ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 'ಮೇಘಸ್ಪೋಟ ಆಗುವುದಕ್ಕೆ 2 ತಾಸು ಮುಂಚೆ ಅಮರನಾಥ ಬಿಟ್ಟೆವು. ನಾವು 10 ಜನರಿದ್ದೇವೆ. ಈಗ ದೆಹಲಿ ರೈಲ್ವೇ ಸ್ಟೇಷನ್‌ನಲ್ಲಿದ್ದೇವೆ. ನಾವು ಸುರಕ್ಷಿತವಾಗಿದ್ದೇವೆ. ನಾವು ಸುರಕ್ಷಿತವಾಗಿರುವುದಕ್ಕೆ ಇಂಡಿಯನ್ ಆರ್ಮಿಯೇ ಕಾರಣ' ಎಂದರು. 

Share this Video
  • FB
  • Linkdin
  • Whatsapp

 ಜೂ.30 ರಂದಷ್ಟೇ ಆರಂಭವಾಗಿದ್ದ ಪ್ರಸಕ್ತ ಸಾಲಿನ ಪವಿತ್ರ ಅಮರನಾಥ ಯಾತ್ರೆ ಭಾರೀ ಅನಾಹುತವೊಂದಕ್ಕೆ ಸಾಕ್ಷಿಯಾಗಿದೆ. ಪವಿತ್ರ ಹಿಮಲಿಂಗ ಇರುವ ಅಮರನಾಥ ಗುಹೆ ಪ್ರದೇಶದಲ್ಲಿ ಭಾರೀ ಪ್ರವಾಹ ಕಾಣಿಸಿಕೊಂಡಿದೆ. ಪರಿಣಾಮ ಭಕ್ತರಿಗಾಗಿ ನಿರ್ಮಿಸಿದ್ದ 25 ಟೆಂಟ್‌ ಮತ್ತು ಭಕ್ತರಿಗೆ ಆಹಾರ ತಯಾರಿಸಲು ನಿರ್ಮಿಸಿದ್ದ 3 ಸಮುದಾಯ ಅಡುಗೆ ಮನೆ ಕೊಚ್ಚಿಹೋಗಿದೆ. ಈ ವೇಳೆ ಟೆಂಟ್‌ನಲ್ಲಿದ್ದ 16 ಭಕ್ತರು ಕೂಡಾ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಘಟನೆಯಲ್ಲಿ ಇನ್ನೂ 40 ಭಕ್ತರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಭೀತಿ ಎದುರಾಗಿದೆ. ರಕ್ಷಣಾ ಕಾರ್ಯ ಮುಂದುವರೆದಿದೆ. 

Related Video