ಎಣ್ಣೆ ಕಿಕ್ಕಲ್ಲಿ ಯುವಕ ಯವತಿ ಮಧ್ಯೆ ಫುಲ್ ಕಿರಿಕ್: viral video

ಸರಾಯಿ ಕುಡಿದು ಹುಡುಗ ಹಾಗೂ ಹುಡುಗಿ ಪರಸ್ಪರ ಹೊಡೆದಾಡಿಕೊಂಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Share this Video
  • FB
  • Linkdin
  • Whatsapp

ಶರಾಬಿನ ಅಮಲೆ ಅಂತದ್ದು, ಅದು ಮನುಷ್ಯನನ್ನು ಕೋತಿಯಂತೆ ಕುಣಿಸುತ್ತದೆ. ಎಣ್ಣೆ ಕುಡಿದವರಿಗೆ ತಾವು ಎಲ್ಲಿದ್ದೇವೆ ಎಂಬುದರ ಅರಿವೇ ಇರುವುದಿಲ್ಲ. ಎಣ್ಣೆಯ ಆಟ ಅಂತಹದ್ದು, ಸರಾಯಿ ಕುಡಿದು ಜಗವನ್ನೇ ಮರೆತು ತೂರಾಡಿದ ಅನೇಕರ ವಿಡಿಯೋಗಳನ್ನು ನಾವು ಈಗಾಗಲೇ ಸಾಕಷ್ಟು ನೋಡಿದ್ದೇವೆ. ಅದೇ ರೀತಿ ಇಲ್ಲೊಂದು ಕಡೆ ಸರಾಯಿ ಕುಡಿದು ಹುಡುಗ ಹಾಗೂ ಹುಡುಗಿ ಪರಸ್ಪರ ಹೊಡೆದಾಡಿಕೊಂಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ಹುಡುಗಿಯರು ಕೂಡ ಹಾದಿ ಬೀದಿ ಎಂಬುದನ್ನು ಮರೆತು ಹೊಡೆದಾಡಲು ಶುರು ಮಾಡಿದ್ದಾರೆ. ಅದೇ ರೀತಿ ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಬಾರೊಂದರ ಮುಂದೆ ಎಣ್ಣೆ ಮತ್ತಿನಲ್ಲಿದ್ದ ಯುವತಿಯೊಬ್ಬಳು ಯುವಕನೊಂದಿಗೆ ಕಿರಿಕ್‌ ಮಾಡಿಕೊಂಡಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇವರ ಜಗಳ ಬಿಡಿಸಲು ಜೊತೆಯಲ್ಲಿದ್ದವರೇ ಸುಸ್ತು ಬಿದ್ದು ಹೋಗಿದ್ದಾರೆ. 

Related Video