Asianet Suvarna News Asianet Suvarna News

ಮುಸ್ಲಿಮ್ ಮಹಿಳೆಯರಿಗೆ ಮೀಸಲಾತಿ: ಮೋದಿಗೆ ಒವೈಸಿ ಸವಾಲು!

Oct 16, 2019, 1:10 PM IST

ಮುಂಬೈ (ಅ.16): ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಯ ಕಾವು ಜೋರಾಗಿದೆ. ಥಾಣೆಯ ಭೀವಂಡಿಯಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ AIMIM ನಾಯಕ ಅಸಾದುದ್ದೀನ್ ಒವೈಸಿ ಮೋದಿಗೆ ಸವಾಲೆಸೆದರು.

ತ್ರಿವಳಿ ತಲಾಖ್ ನಿಷೇಧಿಸಿ ಮುಸ್ಲಿಮ್ ಮಹಿಳೆಯರಿಗೆ ನ್ಯಾಯ ಕೊಡಿಸಿದ್ದೇವೆ ಎಂದು ಭಾವಿಸಿದ್ದರೆ ಅದು ತಪ್ಪು. ಮುಸ್ಲಿಮ್ ಮಹಿಳೆಯರಿಗೆ ನ್ಯಾಯ ಕೊಡಿಸಲೇ ಬೇಕೆಂದಿದ್ರೆ, ಮರಾಠರಿಗೆ ಕೊಟ್ಟಂತೆ ಮುಸ್ಲಿಮ್ ಮಹಿಳೆಯರಿಗೆ ಮೀಸಲಾತಿ ಕೊಡಿ ಎಂದು ಒವೈಸಿ ಹೇಳಿದರು.

288 ಸದಸ್ಯಬಲದ ಮಹಾರಾಷ್ಟ್ರ ವಿಧಾನಸಭೆಗೆ ಅ.21ರಂದು ಚುನಾವಣೆ ನಡೆಯಲಿದೆ. ಅ.24ಕ್ಕೆ ಫಲಿತಾಂಶ ಹೊರಬೀಳಲಿದೆ.