
ಅದೊಂದು ಕಾರಣಕ್ಕೇ ಘಟಿಸಿತಾ ಅಪಘಾತ? ಕೆಲವೇ ನಿಮಿಷಗಳಲ್ಲಿ ಆಗಿದ್ದೇನು?
ನಿಜಕ್ಕೂ ಈ ದುರಂತ ದೇಶವನ್ನೇ ನಡುಗಿಸಿಬಿಟ್ಟಿದೆ.. ನೂರಾರು ಜನರ ಜೀವವನ್ನೇ ಬಲಿಪಡೆದ ಈ ದುರಂತ, ಹೇಗಾಯ್ತು ಅನ್ನೋ ಪ್ರಶ್ನೆಗೆ ಈಗಾಗಲೇ ಹುಡುಕಾಟ ಆರಂಭವಾಗಿದೆ.. ಹಾಗಾದ್ರೆ ಏನು ಉತ್ತರ ಸಿಗ್ಬೋದು? ಯಾವ ಉತ್ತರ ಸಿಕ್ಕರೆ, ಅದರ ಪರಿಣಾಮ ಏನಾಗಿರುತ್ತೆ?
ಕೆಲವೇ ನಿಮಿಷ.. ಕೆಲವೇ ಕೆಲವು ನಿಮಿಷಗಳಾಗಿತ್ತಷ್ಟೇ ವಿಮಾನ ನೆಲದಿಂದ ಆಗಸದ ಹಾರಿ.. ಆದ್ರೆ ಅಷ್ಟ್ರಲ್ಲೇ ಯಾರೂ ನಿರೀಕ್ಷಿಸದೇ ಇದ್ದ, ಊಹಿಸಲೂ ಸಾಧ್ಯವಿಲ್ಲದ, ಒಂದು ಭಯಾನಕ ಘಟನೆ ನಡೀತು.. ನೋಡ್ ನೋಡ್ತಿದ್ದ ಹಾಗೇ ಆ ವಿಮಾನ ನೆಲದ ಕಡೆ ಕುಸೀತು.. ಕ್ಷಣಾರ್ಧದಲ್ಲಿ, ಜ್ವಾಲಾಮುಖಿಯಂಥಾ ಸ್ಫೋಟ.. ಅಲ್ಲಿ ಮುತ್ತಿದ ದಟ್ಟ ಹೊಗೆ, ಆಕಾಶವನ್ನೆಲ್ಲಾ ನುಂಗೋ ಹಾಗೆ ಆವರಿಸಿಕೊಳ್ತು.. ಅಷ್ಟಕ್ಕೂ ಅಲ್ಲಿ ಆಗಿದ್ದೇನು? ಅನಾಹುತಕ್ಕೆ ಕಾರಣವೇನು? ಅದರ ಪರಿಣಾಮ ಏನೇನು? ಅದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..