Aero India 2023 ಬೆಂಗಳೂರಲ್ಲಿ ಸ್ವದೇಶಿ ನಿರ್ಮಿತ ಪ್ರಚಂಡ, ಸೂರ್ಯಕಿರಣ್ ಯುದ್ಧವಿಮಾನದ ಅಬ್ಬರ!

ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏರೋ ಇಂಡಿಯಾ ವಿಶ್ವದ ಗಮನಸೆಳೆದಿದೆ. ಶತ್ರು ರಾಷ್ಟ್ರಗಳಿಗೆ ನಡುಕ ಶುರುವಾಗಿದೆ. ಭಾರತದ ಬತ್ತಳಿಕೆಯಲ್ಲಿರುವ ಪ್ರಚಂಡ ಯುದ್ಧ ವಿಮಾನಗಳ ಸಾಹಸಕ್ಕೆ ಜಗತ್ತೆ ಬೆರಗಾಗಿದೆ. ಇಲ್ಲೀವರೆಗೆ ಲೋಹಹಕ್ಕಿಗಳ ಚಿತ್ತಾರ ಹೇಗಿತ್ತು? ಇಲ್ಲಿದೆ ನೋಡಿ.

Share this Video
  • FB
  • Linkdin
  • Whatsapp

ಬೆಂಗಳೂರಲ್ಲಿ ಪ್ರತಿಷ್ಠಿತ ಏರೋ ಇಂಡಿಯಾ ಶೋ ನಡೆಯುತ್ತಿದೆ. 14ನೇ ಆವೃತ್ತಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಬಳಿಕ ಯುದ್ಧ ವಿಮಾನಗಳ ಅಬ್ಬರ ಆರಂಭಗೊಂಡಿತು. ಸ್ವದೇಶಿ ನಿರ್ಮಿತ ಯುದ್ಧ ವಿಮಾನ, ಲಘು ಹೆಲಿಕಾಪ್ಟರ್ ಹಾರಾಟ ನೋಡುಗ ಕಣ್ಮನ ಸೆಳೆಯುತ್ತಿದೆ. ಪ್ರತಿ ದಿನ ಯುದ್ಧವಿಮಾನಗಳ ಹಾರಾಟ ನೋಡಲು ಜನಸಾಗರವೇ ಹರಿದುಬರುತ್ತಿದೆ. ಸ್ವದೇಶಿ ನಿರ್ಮಿತ ಸುಖೋಯ್, ಪ್ರಚಂಡ ವಿಶ್ವಮಟ್ಟದಲ್ಲೇ ಭಾರಿ ಸಂಚಲನ ಮೂಡಿಸಿದೆ. ಭಾರತದ ಯುದ್ದವಿಮಾನಗಳ ಅಬ್ಬರ ನೋಡಿ ಶತ್ರುರಾಷ್ಟ್ರಗಳೇ ನಡುಗಿ ಹೋಗಿದೆ. ಸೂರ್ಯಕಿರಣ್ ಯುದ್ಧವಿಮಾನ ಆಗಸದಲ್ಲಿ ಸಾಹಸ ಪ್ರದರ್ಶಿಸಿದೆ. ಈ ಬಾರಿಯ ಏರ್‌ಶೋನಲ್ಲಿ ನಡೆದ ಸಾಹಸ ಪ್ರದರ್ಶನ, ಜನರ ಅಭಿಪ್ರಾಯಗಳ ಕಂಪ್ಲೀಟ್ ವಿಡಿಯೋ ಇಲ್ಲಿವೆ.

Related Video