ಇದು ಬೆಂಗಳೂರಿಗೆ ಎಚ್ಚರಿಕೆ ಗಂಟೆ: ಕೊರೋನಾಗಿಂತ ವಾಯು ಮಾಲಿನ್ಯ ಡೇಂಜರ್?
ಭಾರತದಲ್ಲಿ ವಾಯು ಮಾಲಿನ್ಯ ಸಮಸ್ಯೆ ಹೆಚ್ಚಾಗುತ್ತಿದ್ದು, ಪ್ರತಿದಿನ 4 ಸಾವಿರ 600 ಜನರು ಬಲಿಯಾಗುತ್ತಿದ್ದಾರೆ ಎಂದು ವರದಿ ಆಗಿದೆ.
ಬರ್ಮಿಂಗ್ ಹ್ಯಾಮ್ ಯುನಿವರ್ಸಿಟಿ ವಾಯುವ್ಯ ಮಾಲಿನ್ಯ ಕುರಿತು ಶಾಕಿಂಗ್ ಮಾಹಿತಿ ನೀಡಿದ್ದು, 2019ರ ಪ್ರಕಾರ ಪ್ರತಿ ನಿಮಿಷಕ್ಕೆ 3 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ. ಮುಂಬೈ, ಬೆಂಗಳೂರು, ಹೈದ್ರಾಬಾದ್, ಕೊಲ್ಕತ್ತಾ, ಚೆನ್ನೈ, ಸೂರತ್, ಪುಣೆ ಮತ್ತು ಅಹಮದಾಬಾದ್ ನಗರಗಳಲ್ಲಿ ವಾಯುಮಾಲಿನ್ಯದಿಂದ ಹೆಚ್ಚು ಜನರು ಸಾವಿಗೀಡಾಗುತ್ತಿದ್ದಾರೆ ಎಂದು ಹೇಳಿದೆ. ಹೀಗಾಗಿ ದೆಹಲಿಯಲ್ಲಿ ಉಸಿರಾಡುತ್ತಿರುವ ಗಾಳಿ ವಿಷಗಾಳಿ ಎಂದು, ಅಲ್ಲಿನ ಸ್ಕೂಲ್'ಗಳಿಗೆ ಬೀಗ ಹಾಕಲಾಗಿದೆ. ಮಕ್ಕಳನ್ನು ಹೊರಾಂಗಣ ಆಟಕ್ಕೆ ಬಿಡಬೇಡಿ ಎಂದು ಹೇಳಲಾಗಿದೆ. ಆದಷ್ಟು ಸರ್ಕಾರಿ ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಹೇಳಲಾಗಿದ್ದು, ಇನ್ನು ದೇಶದ ಪ್ರಮುಖ ನಗರಗಳಲ್ಲಿ AQI ಪ್ರಮಾಣ ಹೆಚ್ಚಾಗಿದೆ, ಇನ್ನು ನಮ್ಮ ಬೆಂಗಳೂರಿನ AQI ನೋಡುವುದಾದರೆ 45 ರಿಂದ 50 ಪಿಎಂ ಇದೆ. ಇದು ಗುಡ್ ಕಂಡೀಷನ್. ಆದರೆ ದಿನೇ ದಿನೇ ಬೆಂಗಳೂರಿನ ವಾಯುಗುಣ ಹದಗೆಡುತ್ತಾ ಹೋಗುತ್ತಿದೆ. ನಾವೆಲ್ಲರೂ ಎಚ್ಚರಿಕೆ ವಹಿಸುವುದರ ಅಗತ್ಯವಿದೆ.
ಆನೆಗೂ ಹೆದರದೇ, ರಿವರ್ಸ್ ಡ್ರೈವ್ ಮಾಡಿದ ಚಾಲಕ ಧೈರ್ಯಕ್ಕೆ ಭೇಷ್ ಎನ್ನಲೇ ಬೇಕು!