ಹೀಗಿತ್ತು ಉತ್ತರಾಖಂಡ್ ದುರಂತದ ಕೊನೇ ಕ್ಷಣ, 49 ಸೆಕೆಂಡ್‌ನಲ್ಲಿ 10 ಮಂದಿ ನೀರುಪಾಲು!

ಉತ್ತರಾಖಂಡ್ ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ನೋಡ ನೋಡುತ್ತಿದ್ದಂತೆಯೇ ಉಕ್ಕಿ ಹರಿದು ಬಂದ ನೀರಿನಿಂದಾಗಿ ಅಣೆಕಟ್ಟುಗಳು ಧ್ವಂಸಗೊಂಡರೆ, ಅತ್ತ ಗಂಗಾ ವಿದ್ಯುತ್ ಯೋಜನೆ ಕಾಮಗಾರಿಗೂ ಹಾನಿಯುಂಟಾಗಿತ್ತು. ಇದಕ್ಕೂ ಮಿಗಿಲಾಗಿ 197ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, ಇನ್ನೂ ಅನೇಕ ಮಂದಿ ಸುರಂಗದಲ್ಲಿ ಸಿಕ್ಕಾಕೊಂಡಿದ್ದಾರೆ. ಇವನ್ನು ಹೊರ ತೆಗೆಯಲು ರಕ್ಷಣಾ ಕಾರ್ಯ ಇನ್ನೂ ಮುಂದುವರೆದಿದೆ

First Published Feb 10, 2021, 3:12 PM IST | Last Updated Feb 10, 2021, 3:18 PM IST

ಉತ್ತರಾಖಂಡ್ ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ನೋಡ ನೋಡುತ್ತಿದ್ದಂತೆಯೇ ಉಕ್ಕಿ ಹರಿದು ಬಂದ ನೀರಿನಿಂದಾಗಿ ಅಣೆಕಟ್ಟುಗಳು ಧ್ವಂಸಗೊಂಡರೆ, ಅತ್ತ ಗಂಗಾ ವಿದ್ಯುತ್ ಯೋಜನೆ ಕಾಮಗಾರಿಗೂ ಹಾನಿಯುಂಟಾಗಿತ್ತು. ಇದಕ್ಕೂ ಮಿಗಿಲಾಗಿ 197ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, ಇನ್ನೂ ಅನೇಕ ಮಂದಿ ಸುರಂಗದಲ್ಲಿ ಸಿಕ್ಕಾಕೊಂಡಿದ್ದಾರೆ. ಇವನ್ನು ಹೊರ ತೆಗೆಯಲು ರಕ್ಷಣಾ ಕಾರ್ಯ ಇನ್ನೂ ಮುಂದುವರೆದಿದೆ.

ಹಿಮಕುಸಿತಕ್ಕೆ 32 ಬಲಿ, ಇನ್ನೂ 197 ಜನರು ನಾಪತ್ತೆ!

ಹೀಗಿರುವಾಗ ನೀರ್ಗಲ್ಲು ಸಿಡಿದು ಹರಿದು ಬಂದ ನೀರು ತಪೋವನ ಅಣೆಕಟ್ಟಿನ ಬಳಿ ತಲುಪಿದಾಗ ಅಲ್ಲಿನ ಪರಿಸ್ಥಿತಿ ಹೇಗಿತ್ತು. ಇದು ನೋಡ ನೋಡುತ್ತಿದ್ದಂತೆಯೇ ಹತ್ತಕ್ಕೂ ಅಧಿಕ ಮಂದಿ ಕಾರ್ಮಿಕರನ್ನು ಹೇಗೆ ನುಂಗಿ ಹಾಕಿತ್ತು ಎಂಬ ವಿಡಿಯೋ ಒಂದು ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.

ಕೊನೆಯ 49 ಸೆಕೆಂಡ್‌ಗಳ ಶಾಕಿಂಗ್ ವಿಡಿಯೋ ಇದಾಗಿದ್ದು, ಪ್ರಾಣ ಉಳಿಸಿಕೊಳ್ಳಲು ಯತ್ನಿಸುತ್ತಿದ್ದ ಕಾರ್ಮಿಕರು ಕೆಸರು ಹಾಗೂ ನೀರಿನಲ್ಲಿ ಕೊಚ್ಚಿ ಹೋದ ದೃಶ್ಯಗಳು ಇದರಲ್ಲಿ ಸೆರೆಯಾಗಿವೆ.