ಜಮ್ಮುಕಾಶ್ಮೀರದ ಬಾರಾಮುಲ್ಲಾದಲ್ಲಿ 40 ವರ್ಷದ ನಂತರ ದಾಖಲೆಯ ವೋಟಿಂಗ್ ಕೊಟ್ಟ ಸೂಚನೆ ಏನು..?

ಜಮ್ಮು ಮತ್ತು ಕಾಶ್ಮೀರದಲ್ಲಿ ಮೊನ್ನೆ ಲೋಕಸಭಾ ಚುನಾವಣೆಯ ಮತದಾನ ಮುಗಿದಿದೆ.  ಇಲ್ಲಿ ನಡೆದ ಮತದಾನ ದಾಖಲೆಯನ್ನು ಸೃಷ್ಟಿ ಮಾಡಿದೆ. ಹಾಗಿದ್ರೆ ಈ ದಾಖಲೆ ಮತದಾನ ಯಾವ ಕಾರಣಕ್ಕೆ?  ಈ ವಿಶೇಷ ಕಾರ್ಯಕ್ರಮದಲ್ಲಿ ನೋಡೋಣ ಬನ್ನಿ. 

First Published May 22, 2024, 11:54 AM IST | Last Updated May 22, 2024, 11:54 AM IST

ಜಮ್ಮು ಮತ್ತು ಕಾಶ್ಮೀರದಲ್ಲಿ ಮೊನ್ನೆ ಲೋಕಸಭಾ ಚುನಾವಣೆಯ ಮತದಾನ ಮುಗಿದಿದೆ.  ಇಲ್ಲಿ ನಡೆದ ಮತದಾನ ದಾಖಲೆಯನ್ನು ಸೃಷ್ಟಿ ಮಾಡಿದೆ. ಬರೋಬ್ಬರಿ 40 ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಖಲೆ ಮತದಾನ ನಡೆದಿದೆ. ಮತದಾನದ ನಂತರ ಬಾರಾಮುಲ್ಲಾ ನಿವಾಸಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮೊದಲ ಬಾರಿ ವೋಟ್ ಮಾಡಿದವರು ಯಾವ ಉದ್ದೇಶಕ್ಕಾಗಿ ವೋಟ್ ಮಾಡಿದ್ದೇವೆಂದು ಹೇಳಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಕೈಗೊಂಡ ಅನೇಕ ಅಭಿವೃದ್ಧಿಯಿಂದಾಗಿ ಜಮ್ಮು ಮತ್ತು ಕಾಶ್ಮೀರದ ಜನ ತುಂಬಾನೇ ಖುಷಿಯಲ್ಲಿದ್ದಾರೆ. ಹೀಗಾಗಿ ಅಭಿವೃದ್ಧಿಗಾಗಿ ಇಲ್ಲಿನ ಜನ ಹೆಚ್ಚಿನ ಪ್ರಮಾಣದಲ್ಲಿ ವೋಟ್ ಮಾಡಿದ್ದಾರೆಂದು ಕೆಲವರು ಹೇಳುತ್ತಿದ್ದಾರೆ. ಇನ್ನು ಕೆಲವರು ಇದು 370 ಕಾಲಂ ರದ್ಧತಿ ವಿರುದ್ಧವಾಗಿ ನಡೆದ ಮತದಾನವೆಂದು ಹೇಳುತ್ತಿದ್ದಾರೆ. ಹಾಗಿದ್ರೆ ಈ ದಾಖಲೆ ಮತದಾನ ಯಾವ ಕಾರಣಕ್ಕೆ? ಆರ್ಟಿಕಲ್ 370 ರದ್ದತಿ ಬೆಂಬಲಿಸಿ ದಾಖಲೆ ಮತದಾನ ನಡೆಯಿತಾ ಅಥವಾ ಅದರ ವಿರುದ್ಧ ನಡೆದ ಮತದಾನವಾ ಅನ್ನೋದನ್ನು ಈ ವಿಶೇಷ ಕಾರ್ಯಕ್ರಮದಲ್ಲಿ ನೋಡೋಣ ಬನ್ನಿ.