ಅಪಾಯ ತಂದೊಡ್ಡಿತಾ ದೇವರ ಕೋಪ..? ಕತ್ತಲೆ ಕೂಪದಿಂದ ಪಾರಾಗೋಕೆ ಇನ್ನೆಷ್ಟು ಸಮಯ ಬೇಕು..?
240 ಗಂಟೆಯಿಂದಲೂ ಸುರಂಗ ನರಕದಲ್ಲಿ 41 ಮಂದಿ..!
ಬೌಖ್ನಾಗ್ ಬಾಬಾ ಮೊರೆ ಹೋಗಿದ್ದೇಕೆ ಆ ಊರಿನ ಜನ..?
ಒಂದು ಮುನ್ನೆಚ್ಚರಿಕೆ ತಪ್ಪಿಸುತ್ತು ದೊಡ್ಡ ಅನಾಹುತ..?
ಒಂದಲ್ಲ..ಎರಡಲ್ಲಾ..ವಾರವಲ್ಲ..ಬರೋಬ್ಬರಿ 10 ದಿನ..10 ದಿನಗಳಿಂದಲೂ ನಮ್ಮ ದೇಶದ 41 ಮಂದಿ ಕಾರ್ಮಿಕರು ರೌರವ ನರಕ ಅನುಭವಿಸ್ತಾ ಇದಾರೆ.ಈ ಸುರಂಗದೊಳಗೇ(Tunnel) ಸಿಲುಕಿದ್ದಾರೆ, 41 ಮಂದಿ ಕಾರ್ಮಿಕರು. ಕಳೆದ 10 ದಿನಗಳಿಂದಲೂ, ಇಂದಲ್ಲಾ ನಾಳೆ ಸೂರ್ಯೋದಯ ನೋಡ್ತೀವಿ ಅಂತ ಕಾಯ್ತಾ ಇದಾರೆ.. ಆದ್ರೆ ಅವರ ಬಾಳನ್ನ ಕವಿದಿರೋ ಅಂಧಕಾರ ಮಾತ್ರ, ರಾಕ್ಷಸನ ಹಾಗೆ ಆವರಿಸಿಕೊಂಡುಬಿಟ್ಟಿದೆ.. ಬದುಕು ನರಕವಾಗಿದೆ. ಒಂದ್ ಕಡೆ ಸುರಂಗದೊಳಗೆ ಸಿಲುಕಿದವರ ನರಕಯಾತನೆಯಾದ್ರೆ, ಇನ್ನೊಂದ್ ಕಡೆ ತನ್ನ ಕುಟುಂಬದವರ ಪರಿಸ್ಥಿತಿ ನೋಡಿ ಕುಟುಂಬಸ್ಥರು ಯಮ ಹಿಂಸೆ ಅನುಭವಿಸ್ತಾ ಇದಾರೆ.. ನಿಜಕ್ಕೂ ಈ ದುರಂತ ಮಾತ್ರ, ಅತಿ ಭೀಕರ.. ಅತಿ ಭಯಾನಕ.. ಇದನ್ನ ನೋಡ್ತಾ ಕೂತಿರೋ ಭಾರತೀಯರ ಮನಸ್ಸಲ್ಲಿರೋದು ಒಂದೇ ಪ್ರಶ್ನೆ.. ಈ ಸುರಂಗದ ರಕ್ಕಸ ದ್ವಾರ ಯಾವಾಗ ಓಪನ್ ಆಗುತ್ತೆ ಅನ್ನೋದು. ಅವತ್ತು ನವಂಬರ್ 12.. ದೇಶವೆಲ್ಲಾ ದೀಪಾವಳಿ(Deepavali) ಸಂಭ್ರಮದಲ್ಲಿದ್ದ ದಿನ.. ಎಲ್ಲೆಲ್ಲೂ ದೀಪದ ಬೆಳಕು, ಪಟಾಕಿ ಸದ್ದು ಜಗಮಗ ಅಂತಿದ್ದ ದಿನ.. ಆದ್ರೆ ಅದೇ ದಿನ, ಸುಮಾರು 41 ಮಂದಿ ಕಾರ್ಮಿಕರು, ತಮ್ಮ ಕೆಲಸ ಮಾಡೋದಕ್ಕೆ ಅಂತ, ಉತ್ತರಖಾಂಡದ, ಉತ್ತರಕಾಶಿಯ, ಸಿಲ್ಕ್ಯಾರ ಟನಲ್ ಒಳಗೆ ಹೋಗಿದ್ರು.. ಅವತ್ತು ಹೋದೋರು, ಇವತ್ತಿನ ತನಕ ವಾಪಾಸ್ ಬರೋಕೆ ಸಾಧ್ಯವಾಗಿಲ್ಲ. ಉತ್ತರಕಾಶಿಯಲ್ಲಿ(Uttarakashi) ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿ(National high way) ನಿರ್ಮಾಣದ ಸಲುವಾಗಿ ಸುರಂಗ ಮಾರ್ಗ ನಿರ್ಮಾಣ ಮಾಡ್ತಾ ಇದ್ರು.. ಸಿಲ್ಕ್ಯಾರಾ ಮತ್ತು ದಾಂಡಲ್‌ಗಾಂವ್ ಮಧ್ಯೆ ನಿರ್ಮಾಣ ಮಾಡ್ತಾ ಇದ್ದ ಸುಮಾರು ನಾಲ್ಕೂವರೆ ಕಿ. ಮೀ. ಉದ್ದದ ಸುರಂಗ ಮಾರ್ಗ ಇದು. ಆದ್ರೆ, ಭಾನುವಾರ ಮುಂಜಾನೆ ಈ ಸುರಂಗ ಮಾರ್ಗದ ಒಂದು ಬದಿ ಕುಸಿದು ಬಿದ್ದಿದೆ.. ಕೆಲಸ ಮಾಡ್ತಿದ್ದ ಕಾರ್ಮಿಕರು ಒಳಗೆ ಸಿಲುಕಿದ್ದಾರೆ.