Asianet Suvarna News Asianet Suvarna News

27 ದಿನಗಳ ಅಧಿವೇಶನ ಯಶಸ್ವಿ, 13 ಮಸೂದೆ ಮಂಡನೆ: ಪ್ರಲ್ಹಾದ್ ಜೋಶಿ

ಸಂಸತ್ತಿನಲ್ಲಿ 27 ದಿನಗಳ ಅಧಿವೇಶನ ಯಶಸ್ವಿಯಾಗಿ ನಡೆದಿದೆ. ಪ್ರತಿಪಕ್ಷಗಳ ಎಲ್ಲಾ ಬೇಡಿಕೆಯ ಮೇಲೂ ವಿಸ್ತ್ರತವಾಗಿ ಚರ್ಚೆ ಮಾಡಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
 

ನವದೆಹಲಿ (ಏ. 7): ಸಂಸತ್ತಿನಲ್ಲಿ (Parliament) 27 ದಿನಗಳ ಅಧಿವೇಶನ (Budget session)ಬಹಳ ಯಶಸ್ವಿಯಾಗಿ ನಡೆದಿದ್ದು, ಒಟ್ಟಾರೆಯಾಗಿ 13 ಮಸೂದೆಗಳು (Bill) ಮಂಡನೆಯಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ( Parliamentary Affairs Minister Pralhad Joshi ) ಗುರುವಾರ ಹೇಳಿದ್ದಾರೆ.

ಪ್ರತಿಪಕ್ಷಗಳ ಎಲ್ಲಾ ಬೇಡಿಕೆಯ ಮೇಲೂ ವಿಸ್ತ್ರತವಾಗಿ ಚರ್ಚೆ ಮಾಡಲಾಗಿದೆ. ಎರಡೂ ಸದನಗಳಲ್ಲಿ 11 ಮಸೂದೆಗಳು ಈವರೆಗೂ ಪಾಸ್ ಆಗಿದೆ. ಬೆಲೆಏರಿಕೆ ಬಗ್ಗೆಯೂ ಸರ್ಕಾರ ಉತ್ತರ ನೀಡಿದೆ ಎಂದು ತಿಳಿಸಿದ್ದಾರೆ. ಬಜೆಟ್ ಅಧಿವೇಶನ ಜನವರಿ 30 ರಂದು ಅಧಿವೇಶನ ಪ್ರಾರಂಭವಾಗಿತ್ತು. ಏಪ್ರಿಲ್ 7 ಕ್ಕೆ ಮುಕ್ತಾಯ ಕಂಡಿದೆ. ಒಟ್ಟು 27 ದಿನಗಳ ಕಾಲ ಕಾರ್ಯಕಲಾಪ ನಡೆದಿದೆ ಎಂದು ತಿಳಿಸಿದರು.

Budget2022: ಇಂದಿನಿಂದ ಸಂಸತ್ತಿನ ಬಜೆಟ್‌ ಅಧಿವೇಶನ ಪುನಾರಂಭ

ರಾಷ್ಟ್ರಪತಿಗಳು ಎರಡೂ ಸದನದ ಸದಸ್ಯರನ್ನು ಉದ್ದೇಶಿಸಿ ಮಾತನ್ನಾಡಿದ್ದಾರೆ. ಲೋಕಸಭೆಯಲ್ಲಿ ಇದೇ ಮೊದಲ ಬಾರಿಗೆ, ರೈಲ್ವೇಸ್, ರಸ್ತೆ ಸಾರಿಗೆ, ವಿಮಾನ, ಪೋರ್ಟ್ ಮತ್ತು ಶಿಪ್ಪಿಂಗ್ ಈ ಎಲ್ಲಾ ಇಲಾಖೆಗಳ ಬಗ್ಗೆ ಏಕಕಾಲದಲ್ಲಿ ಚರ್ಚೆ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.

Video Top Stories