ಮೋದಿ ವಿರುದ್ಧ ಮಹಾಮೈತ್ರಿ ಒಂದೇ ವಾರದಲ್ಲಿ ಠುಸ್‌ಪಟಾಕಿ
ಪಾಟ್ನಾದಲ್ಲಿ ದೋಸ್ತಿ ಮಾತುಕತೆ ನಡೆಸಿ ಇನ್ನು ಒಂದು ವಾರ ಆಗಿಲ್ಲ. ಆದ್ರೆ ವಾರ ಕಳೆಯುವ ಮುನ್ನವೇ ದೋಸ್ತಿಗಳ ನಡುವೆ ಶುರುವಾಗಿದೆ ಕುಸ್ತಿ!
ಬೆಂಗಳೂರು (ಜೂ.28): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಎಲ್ಲಾ ವಿಪಕ್ಷಗಳು ಪಾಟ್ನಾದಲ್ಲಿ ದೊಡ್ಡ ಮಟ್ಟದ ಸಭೆ ನಡೆಸಿದ್ದು ಆಯ್ತು. ಆದರೆ, ಒಂದೇ ವಾರದಲ್ಲಿ ಪಾಟ್ನಾದಲ್ಲಿ ದೋಸ್ತಿ ಪಕ್ಷಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಒಂದೇ ವಾರದಲ್ಲಿ ಕೇರಳ, ಬಂಗಾಳ ಹಾಗೂ ದೆಹಲಿಯಲ್ಲಿ ಇದೇ ದೋಸ್ತಿ ಪಾರ್ಟಿಗಳ ನಡುವೆಯೇ ಕುಸ್ತಿ ಆರಂಭವಾಗಿದೆ. ರಾಹುಲ್ ಗಾಂಧಿ, ಲಾಲೂಪ್ರಸಾದ್ ಯಾದವ್, ಶರದ್ ಪವಾರ್ ಸೇರಿದಂತೆ ವಿಪಕ್ಷಗಳ ಘಟಾನುಘಟಿ ನಾಯಕರೇ ಈ ಸಭೆಯಲ್ಲಿ ಹಾಜರಿದ್ದರು.
ಕುರಾನ್ ಬಗ್ಗೆ ಒಂದು ಡಾಕ್ಯುಮೆಂಟರಿ ಮಾಡಿ ನೋಡಿ, ಪರಿಣಾಮ ಗೊತ್ತಾಗುತ್ತೆ: ಅಲಹಾಬಾದ್ ಹೈಕೋರ್ಟ್