Asianet Suvarna News Asianet Suvarna News

ಆರ್ಟಿಕಲ್ 370 ತೆಗೆದು 2 ವರ್ಷ: ಶ್ರೀನಗರದಲ್ಲಿ ವೀರ ಯೋಧರಿಗಾಗಿ ವಿಶೇಷ ಕಾರ್ಯಕ್ರಮ

Aug 5, 2021, 3:49 PM IST

ಶ್ರೀನಗರ (ಆ. 05):  ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಆರ್ಟಿಕಲ್ 370  ತೆಗೆದು ಇಂದಿಗೆ ಎರಡು ವರ್ಷಗಳಾದ ಪ್ರಯುಕ್ತ ಸಿಂಧೂ ದರ್ಶನ ಯಾತ್ರಾ ಸಮಿತಿ ಹಾಗೂ ಹಿಮಾಲಯ ಪರಿವಾರ ಸಂಘಟನೆ ಶ್ರೀನಗರದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು.  

ಭಾರತ ಸರ್ಕಾರಕ್ಕೆ ಮತ್ತು ನರೇಂದ್ರ ಮೋದಿಯವರಿಗೆ ಹಾಗೂ ಸಾವಿರಾರು ಜನ ಪ್ರಾಣತ್ಯಾಗ ಮಾಡಿರುವ ವೀರ ಯೋಧರಿಗೆ ಧನ್ಯವಾದ ಸಮರ್ಪಣೆ ಮಾಡಲಾಯಿತು. ಸಿಂಧೂ ದರ್ಶನ ಯಾತ್ರಾ ಸಮಿತಿ ಹಾಗೂ ಹಿಮಾಲಯ ಪರಿವಾರ ಸಂಘಟನೆಯ ರಾಜ್ಯಾಧ್ಯಕ್ಷ ಡಾ. ವೆಂಕಟೇಶ್ ಮೌರ್ಯ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ನಾ. ನಾಗರಾಜು. ಬಜರಂಗದಳದ ಸೂರ್ಯನಾರಾಯಣ ಸೇರಿದಂತೆ ನೂರಕ್ಕೂ ಹೆಚ್ಚು ಸಿಂಧೂ ದರ್ಶನ ಯಾತ್ರೆ ಸಮಿತಿಯ ದೇಶ ಭಕ್ತರು ಭಾಗವಹಿಸಿದ್ದರು.